.comment-link {margin-left:.6em;}

ನೂರೆಂಟು ಸುಳ್ಳು (nUreMTu suLLu)

You may not be a "Dhrutharashtra", but we want to be the Sanjaya for you!

Sunday, March 26, 2006

Parody Too Subtle For Kannada Prabha?

Some one creates a parody web site comparing Bush to Shiva. And, Kannada Prabha reports it with a straight-face:

ವಾಷಿಂಗ್ಟನ್: `ಐ ಆಯಮ್ ಶಿವ... ಬುಶ್ ಶಿವ'. ಹೊಸ ಜಗತ್ತಿನ ಸೃಷ್ಟಿಕರ್ತ, ದುಷ್ಟ ಜಗತ್ತಿನ ವಿನಾಶಕ!!!
-ಹೀಗೆಂದು ಅಮೆರಿಕ ಅಧ್ಯಕ್ಷ ಜಾರ್ಜ್ ಬುಷ್‌ರನ್ನು ಬಣ್ಣಿಸಲಾಗಿದೆ ಅಮೆರಿಕದ ವೆಬ್‌ಸೈಟ್ ಒಂದರಲ್ಲಿ.
...

...ಶಿವ ಹೇಗೆ ದುಷ್ಟರ ದಮನಗೈದು, ದುಷ್ಟರ ಜಗತ್ತನ್ನು ನಾಶಮಾಡಿ ಹೊಸ ಜಗತ್ತನ್ನು ಸೃಷ್ಟಿಸುತ್ತಾನೋ ಅದೇ ರೀತಿ ಬುಷ್ ಇರಾಕ್ ಮೇಲೆ ಯುದ್ಧ ಮಾಡಿ, `ದುಷ್ಟ'ರ ದಮನಗೈದು ಹೊಸ ಜಗತ್ತಿನ ಸೃಷ್ಟಿಗೆ ಹೊರಟಿದ್ದಾರೆ ಎಂದು ಪರೋಕ್ಷವಾಗಿ ಈ ವೆಬ್‌ಸೈಟಿನಲ್ಲಿ ಹಾಡಿ ಹೊಗಳಲಾಗಿದೆ.
...
ಬುಷ್ ದೇವರ ಅವತಾರ. ದೇವರೇ ಖುದ್ದಾಗಿ ಬಯಸಿ ಬುಷ್‌ರನ್ನು ಅಮೆರಿಕ ಅಧ್ಯಕ್ಷರನ್ನಾಗಿ ಮಾಡಿದ್ದಾರೆ ಎಂಬುದು ವೆಬ್‌ಸೈಟ್‌ನ ಒಕ್ಕಣೆ. ದುಷ್ಟಶಕ್ತಿಗಳನ್ನು ದಮನ ಮಾಡಿ ಹೊಸ ಜಗತ್ತಿನ ಸೃಷ್ಟಿಗೆ ಸಹಾಯ ಮಾಡಿ ಎಂದೂ ಕಳಕಳಿಯ ಮನವಿ ಮಾಡಲಾಗಿದೆ ಇದರಲ್ಲಿ.
...

Update: Another Bush - Shiva comparison. Now, it's a cartoon in the International Herald Tribune. And the idiocy begins. IHT publishes a cartoon and a cartoon called Dr Shami Ahmed belonging to Maharashtra Navnirman Sena (MNS) wants to burn effigies of the President Bush. Even Dick Cheney is not so off-target.

3 Comments:

Blogger Unknown said...

ಕನ್ನಡಪ್ರಭ (ವಿಶೇಷವಾಗಿ ಅದರ ಅಂತರ್ಜಾಲದ ಪ್ರತಿ) ಬರ್ತಾ ಬರ್ತಾ ತೀರಾ ಹದಗೆಡುತ್ತಿದೆ. ಮನಸ್ಸಿಗೆ ಬಂದಂತೆ ಬರೆಯುತ್ತಾರೆ ಕೆಲವೊಮ್ಮೆ. ಬೇಜವಾಬ್ದಾರಿಯೂ ಹೆಚ್ಚಾಗಿದೆ (ಬುಶ್‍ಶಿವ ತಾಣದಲ್ಲಿ ಕೆಳಗಿರುವ ಚಿತ್ರವನ್ನು ನೋಡಿದ್ದರೆ ಸಾಕಿತ್ತು ಇದು ಯಾವತರಹದ ತಾಣವೆಂದು ತಿಳಿಯಲು)

ಆದರೆ, ಈ ತರಹದ ತಾಣಗಳು ಬೆಂಕಿಯ ಜೊತೆ ಆಟವಾಡಿದಂತೆ. ಡ್ಯಾನಿಶ್ ಕಾರ್ಟೂನ್‍ಗಳಂತೆ ಮತ್ತೊಂದು ತೊಂದರೆ ಸಾಧ್ಯವೆಂದು ತಿಳಿದೇ ಈ ತರಹದ ಸಾಹಸಕ್ಕೆ ಕೈಹಾಕಿದ್ದಾರೆ..

ನಿಮಗೆ ಡಾಕ್ಟರ್ ಅಹ್ಮದರ ನಡುವಳಿಕೆ idiocy ಎಂದು ಹೇಳುವ ಹಕ್ಕಿದ್ದರೆ, ಈ ತರಹದ ಪಾರಡಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುವ ಹಕ್ಕೂ ಕುಪಿತ ಜನರಿಗಿದೆಯಲ್ಲವೇ? ಅದು ತಪ್ಪೇ?

Mar 26, 2006, 5:00:00 AM  
Blogger v.v. said...

ಮ್ಮ ಪ್ರತಿಕ್ರಿಯೆಗೆ ವಂದನೆಗಳು.

ನಾನು ಅಭಿವ್ಯಕ್ತಿ ಸ್ವಾತಂತ್ರ್ಯದಲ್ಲಿ ಸಂಪೂರ್ಣ ನಂಬಿಕೆ ಉಳ್ಳವನು. ಡೇನಿಷ್ ಕಾರ್ಟೂನಿಸ್ಟ್‌ಗಳಿಗೆ ತಮಗೆ ಇಷ್ಟವಿರುವ ಕಾರ್ಟೂನುಗಳನ್ನು ಬರೆಯುವ ಸ್ವಾತ್ರಂತ್ಯ ಇರುವಂತೆ, ಅವುಗಳನ್ನು ಪ್ರತಿಭಟಿಸುವ ಸ್ವಾತಂತ್ರ್ಯ ಮುಸ್ಲಿಮರನ್ನೂ ಕೂಡಿ ಎಲ್ಲರಿಗೂ ಇರಬೇಕೆಂದು ನಂಬಿದವನು.

ನಾನು "idiocy" ಎಂದದ್ದು, ಪ್ರತಿಭಟನೆಯನ್ನಲ್ಲ. ಬುಶ್ ಎಫ್ಫಿಜಿ ಸುಡುವ ಆಲೋಚನೆಗೆ. ಆತನ ಇತರೆ ತಪ್ಪುಗಳೇನೇ ಇರಲಿ, ಬುಶ್, ಡಾ.ಅಹ್ಮದರಿಗೆ ಇಷ್ಟವಿಲ್ಲದ ಆ ಕಾರ್ಟೂನು ರಚಿದವನೂ ಅಲ್ಲ. ಪ್ರಕಟಿಸಿದವನೂ ಅಲ್ಲ.

Mar 26, 2006, 1:48:00 PM  
Blogger Unknown said...

ಕ್ಷಮಿಸಿ. ನಾನು ಸರಿಯಾಗಿ ಓದಲಿಲ್ಲ. ಭುಶಿವ.ಕಾಮ್ ಪ್ರಸಂಗದಿಂದ ಬುಶ್ ಎಫಿಜಿ ಸುಡುವುದು idiocyಯೇ.
On a lighter note,
ಆ ಮನುಷ್ಯನ ಎಫಿಜಿ ಸುಡುವುದು ಯಾವ ಸಂದರ್ಭದಲ್ಲಾದರೂ ಉಚಿತವೇ ;)

Mar 26, 2006, 3:33:00 PM  

Post a Comment

<< Home

/* */