.comment-link {margin-left:.6em;}

ನೂರೆಂಟು ಸುಳ್ಳು (nUreMTu suLLu)

You may not be a "Dhrutharashtra", but we want to be the Sanjaya for you!

Tuesday, March 28, 2006

ಒಂದೇ ತಲೆಗೆ ಎರಡು ಟೊಪ್ಪಿಗೆ - Hats Off!

ನನ್ನ ಹಿಂದಿನ ಲೇಖನವನ್ನು ಓದಿ ಶಿವ ಎಂಬುವರು ಪ್ರತಿಕ್ರಿಯಿಸಿದ್ದಾರೆ. ಅವರ ಪ್ರತಿಕ್ರಿಯೆ (ಅವರು ಕೇಳದಿದ್ದರೂ) ನನ್ನನ್ನು ನನ್ನ ಲೇಖನಗಳ ಬಗ್ಗೆ ಒಂದು ವಿವರಣೆ ನೀಡುವಂತೆ ಪ್ರಭಾವಬೀರಿದ್ದರಿಂದ, ಅವರ ಪ್ರತಿಕ್ರಿಯೆ ಮತ್ತು ನನ್ನ ವಿವರಣೆ ಎರಡನ್ನೂ ಇಲ್ಲಿ ನೀಡಿದ್ದೇನೆ.

ಶಿವ ಅವರ ಪ್ರತಿಕ್ರಿಯೆ:
ಮೊದಲು ಮನೆಗೆ ವಿಜಯಕರ್ನಾಟಕವನ್ನು ತರಿಸುತ್ತಿದ್ದೆ.ವಿಶ್ವೇಶ್ವರ ಭಟ್ ಮಾತ್ರವಲ್ಲ ವರ್ಣರಂಜಿತವಾಗಿ ಬರೆಯೋದು. ಶನಿವಾರ ಪ್ರತಾಪ್ ಸಿಂರ ಅಂಕಣ ಇರುತ್ತದೆ.ಅವರು ಸುಮಾರಾಗಿ ವಿಶ್ವೇಶ್ವರ ಭಟ್, ರವಿ ಬೆಳಗೆರೆಯವರ ಹಾಗೆ ಬರೆಯೋದು.ಈಗ 'ಕನ್ನಡಪ್ರಭ' ತರಿಸುತ್ತಿದ್ದೇನೆ. :-)
ನನ್ನ ವಿವರಣೆ:
ಶಿವ ಅವರೇ,
ಪ್ರತಿಕ್ರಿಯೆಗಾಗಿ ವಂದನೆಗಳು. ವಿಜಯ ಕರ್ನಾಟಕಕ್ಕಿಂತ ಕನ್ನಡ ಪ್ರಭ (ಅಥವಾ ಪ್ರಜಾವಾಣಿ/ಸಂಯುಕ್ತ ಕರ್ನಾಟಕ) ಉತ್ತಮವಿರಬಹುದೇ? ನನಗೆ ತಿಳಿದಿಲ್ಲ. ಹಾಗೆಯೇ ಶ್ರೀ ಭಟ್ಟರ ಲೇಖನಗಳಲ್ಲಿ ಇರುವ ಫ್ಯಾಕ್ಚುಯಲ್ ತಪ್ಪುಗಳು ಇತರೆ ಪತ್ರಿಕೆಗಳ/ಲೇಖಕರ ಲೇಖನಗಳಲ್ಲಿ ಇರುವುದಿಲ್ಲವೇ? ಅದೂ ಸಹ ನನಗೆ ತಿಳಿಯದು.

ನನ್ನ ಲೇಖನಗಳು ಬಹುಮಟ್ಟಿಗೆ ವಿಜಯ ಕರ್ನಾಟಕ ಮತ್ತು ಶ್ರೀ ಭಟ್ಟರ ಲೇಖನಗಳ ಬಗ್ಗೆಯೇ ಇದ್ದರೆ ಅದಕ್ಕೆ ಕಾರಣ ಇಂದು ವಿಜಯ ಕರ್ನಾಟಕ ಕನ್ನಡದ ನಂ. ೧ ಪತ್ರಿಕೆಯಾಗಿರುವುದೇ ಆಗಿದೆ.

ಮತ್ತೊಂದು ವಿಚಾರ: ಶ್ರೀ ಭಟ್ಟರ ಲೇಖನಗಳ ಬಗ್ಗೆ ನಾನು ಬರೆಯುವುದೇನೇ ಇರಲಿ, ಪ್ರಜಾವಾಣಿ, ಸಂಯುಕ್ತ ಕರ್ನಾಟಕ, ಕನ್ನಡ ಪ್ರಭಗಳಂತಹ ಎಸ್ಟಾಬ್ಲಿಷ್ಡ್ ದಿನ ಪತ್ರಿಕೆಗಳನ್ನು ಹಿಮ್ಮೆಟ್ಟಿಸಿ ವಿಜಯ ಕರ್ನಾಟಕದಂತಹ ಹೊಸ ದಿನಪತ್ರಿಕೆಯನ್ನು ನಂ. ೧ ಮಾಡಿರುವ ಭಟ್ಟರ ಸಾಧನೆ, ನೈಪುಣ್ಯ ಎಲ್ಲರೂ ಮೆಚ್ಚತಕ್ಕದ್ದೇ. ಹ್ಯಾಟ್ಸ್ ಆಫ್ ಟು ಹಿಮ್!

ಲಕ್ಷಾಂತರ ಮಂದಿ ಓದುಗರಿರುವ ಒಂದು ಪತ್ರಿಕೆಯನ್ನು ನಡೆಸುವುದು ಸುಲಭದ ಮಾತಲ್ಲ. ಸಂಪಾದಕನ ಕೆಲಸ ಪೂರ್ಣಾವಧಿ ಕೆಲಸ. ಸಂಪಾದಕನಿಗೆ ಲೇಖನಗಳನ್ನು ಬರೆಯಲು ಬೇಕಿರುವ ರೀಸರ್ಚ್, ಸಿದ್ಧತೆಗಳನ್ನು ಮಾಡಿಕೊಳ್ಳಲು ಸಮಯ ಸಿಗುವುದು ಕಷ್ಟ. ಭಟ್ಟರು, ಬೆಳಗೆರೆಯಂತಹವರು ಸಂಪಾದಕ/ಲೇಖಕ ಹೀಗೆ ಎರಡೆರಡು ಟೊಪ್ಪಿಗಳನ್ನು ಹೊತ್ತಾಗ ಎರಡೂ ವಿಭಾಗಗಳಲ್ಲಿ ತಪ್ಪುಗಳಾಗುವುದು ನಿಶ್ಚಿತ ಎಂದೇ ನನ್ನ ಅಭಿಪ್ರಾಯ.

ವಂದನೆಗಳೊಂದಿಗೆ,

ಸಂಜಯ

4 Comments:

Anonymous Anonymous said...

ನಾನು ಕನ್ನಡಪ್ರಭ ಓದೋಕೆ ಆರಂಭಿಸಿ ಸುಮಾರಾಗಿ ೧ ವರ್ಷವಾಗುತ್ತ ಬಂತು. :-)
ತಪ್ಪ್ಪುಗಳಾಗೋದು ಬೇರೆ, ಉದ್ದೇಶೆಪೂರ್ವಕವಾಗಿ(ತಮ್ಮ ಅನುಕೂಲಕ್ಕಾಗಿ) ತಪ್ಪುಗಳನ್ನು ಮಾಡೋದು ಬೇರೆ.ರವಿ ಬೆಳಗೆರೆ ಮತ್ತು ವಿಶ್ವೇಶ್ವರ ಭಟ್ ತಮ್ಮ ಲೇಖನಗಳನ್ನು ವರ್ಣರಂಜಿತವಾಗಿಸಲು ಈ ತಪ್ಪುಗಳನ್ನು ಮಾಡುತ್ತಾರೆ ಎಂಬುದು ನನ್ನ ಅನಿಸಿಕೆ.ನಾನು ತಪ್ಪಾಗಿರಲೂಬಹುದು.
ವಿಶ್ವೇಶ್ವರ ಭಟ್ ಮತ್ತು ತಂಡಕ್ಕೆ ವಿಜಯಕರ್ನಾಟಕದ ಯಶಸ್ಸಿನ ಕ್ರೆಡಿಟ್ ಖಂಡಿತ ಸಲ್ಲಬೇಕು. ಪೀತಪತ್ರಿಕೆ ಅಂತ ಕರಿಸಿಕೊಳ್ಳುತ್ತಿದ್ದ "ಹಾಯ್ ಬೆಂಗಳೂರ್"ನ್ನು ,ಯಾವುದೇ ಜಾಹಿರಾತಿನ ಸಹಾಯವಿಲ್ಲದೇ ನಡೆಸಿಕೊಂದು ಹೋಗುವುದು ಸುಲಭವೇನಲ್ಲ.ಈಗ ಟಿ.ಎನ್.ಸೀತರಾಮ್ ಮೊದಲಾದವರು ಸಾರ್ವಜನಿಕ ಸಭೆಗಳಲ್ಲಿ 'ಹಾಯ್ ಬೆಂಗಳೂರ್"ನ ಬಗ್ಗೆ ಒಳ್ಳೆಯ ಮತನಾಡುತ್ತಾರೆ!Hats off!

Mar 29, 2006, 10:43:00 PM  
Blogger v.v. said...

ಶಿವರವರಿಗೆ,

ನಮಸ್ಕಾರ.

ಭಟ್ಟರ ಲೇಖನಗಳ ಟ್ರ್‍ಆಕ್ ರೆಕಾರ್‍ಡ್ ನೋಡಿ ನಿಮ್ಮ ಅನಿಸಿಕೆ ನನಗೂ ಸಹ ಸರಿ ಎನ್ನಿಸಿದರೂ, ನೀವೆಂದಂತೆ ಅದು ಅನಿಸಿಕೆ ಮಾತ್ರ.

ವಂದನೆಗಳು.

Mar 30, 2006, 10:21:00 PM  
Blogger Anveshi said...

ಸಂಜಯ ಅವರೆ,
ಕನ್ನಡ ಪತ್ರಿಕೋದ್ಯಮದಲ್ಲಿ ಶ್ರೀ ವಿಶ್ವೇಶ್ವರ ಭಟ್ ಮಾಡಿದ ಸಾಧನೆ ಅಕ್ಷರಶಃ ಅಪೂರ್ವ ಎನ್ನಬಹುದು. ಅವರೇ ಸ್ವತಃ ಪುಟಗಳನ್ನು ಪರಿಶೀಲಿಸಿ, ಬದಲಾವಣೆ ಮಾಡಿ, ಪ್ರಮುಖ ಸುದ್ದಿಗಳಿದ್ದರೆ ಅವರೇ ಉಸ್ತುವಾರಿ ವಹಿಸಿ ಪುಟ ವಿನ್ಯಾಸ ಮಾಡಿಸುತ್ತಿರುವುದು ಬಹುಶಃ ಹೆಚ್ಚಿನವರಿಗೆ ತಿಳಿದಿರಬಹುದು. ಆಕರ್ಷಕ ಶೀರ್ಷಿಕೆ, ಅಪೂರ್ವ ಪುಟ ವಿನ್ಯಾಸಗಳೊಂದಿಗೆ ಪುಟಕ್ಕೊಂದು ಅಂಕಣ (ಪುಟ್ಟದಾದರೂ)... ಇವೆಲ್ಲಾ ಅವರ ಕ್ರಿಯಾತ್ಮಕತೆಯ ಪರಿಣಾಮ.
ಅದಿರಲಿ, ನಿಮ್ಮ ಬ್ಲಾಗ್ ಅಪ್ ಡೇಟ್ ಆಗದೆ ಕೆಲವು ದಿನಗಳಾದುವಲ್ಲ?....

Apr 12, 2006, 7:12:00 AM  
Blogger v.v. said...

ಅಸತ್ಯಾನ್ವೇಷಿಗಳೇ
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ನೀವೆನ್ನುವಂತೆ ಶ್ರೀ ವಿಶ್ವೇಶ್ವರ ಭಟ್ಟರ ಸಾಧನೆ ಎಲ್ಲರೂ ಮೆಚ್ಚುವಂತಹುದೇ. ಅದರಲ್ಲಿ ಯಾವುದೇ ಸಂದೇಹವಿಲ್ಲ. ಇಂದು ಕನ್ನಡದ ಪ್ರಮುಖ ಪತ್ರಿಕೋದ್ಯಮಿಗಳಲ್ಲಿ ನಂಬರ್ ೧ ಪಟ್ಟ ಇದ್ದರೆ, ಬಹುಶಃ ಅದು ಭಟ್ಟರಿಗೇ ಸಲ್ಲಬೇಕು. ಆದರೆ, ಇಂತಹ ಪ್ರತಿಭಾನ್ವಿತ ಮತ್ತು ಪ್ರಮುಖ ವ್ಯಕ್ತಿಯ ಕಾಲಂಗಳಲ್ಲಿ ಇಷ್ಟೊಂದು ಫ್ಯಾಕ್ಚುಯಲ್ ತಪ್ಪುಗಳು ಇರುವುದು ನಿಜಕ್ಕೂ ಖೇದದ ವಿಷಯ.

ಇಂತಹ ತಪ್ಪುಗಳಾದಾಗ, ನಾನು ಗಮನಿಸಿದಂತೆ ಅವು ಬಹು ಮಟ್ಟಿಗೆ ಭಟ್ಟರ ನರೇಟೀವ್‍ಗೆ ಪೂರಕವಾಗಿರುತ್ತವೆ. ಹಾಗಾದಾಗ, ಓದುಗರನ್ನು ತಮ್ಮ ದಾರಿಗೇ ಎಳೆಯಲು ಭಟ್ಟರು ಬೇಕೆಂದೇ ಈ ತಪ್ಪುಗಳನ್ನು ಮಾಡಿರಬಹುದೆಂದೆನಿಸುತ್ತದೆ; ಭಟ್ಟರ ವಿಶ್ವಾಸರ್ಹತೆಯನ್ನು ಪ್ರಶ್ನಿಸುವಂತಾಗುತ್ತದೆ. ಓದುಗನ ವಿಶ್ವಾಸರ್ಹತೆ ಕಳೆದುಕೊಂಡ ಪತ್ರಕರ್ತನಿಗೆ ಉಳಿಯುವುದಾದರೂ ಏನು?

ವಂದನೆಗಳೊಂದಿಗೆ,
"ಸಂಜಯ"

ಮರೆತ ಮಾತು: ಈ ಬ್ಲಾಗನ್ನು ಶುರು ಮಾಡಿದಾಗಿನ ಹುರುಪು ಈಗ ನನ್ನಲ್ಲಿಲ್ಲ. (ಬೇಕಾದರೆ, ಆರಂಭ ಶೂರತ್ವ ಎನ್ನಿ). ಹಾಗಾಗಿ ಅಪ್‍ಡೇಟ್ಸ್ ಕಡಿಮೆಯಾಗಿವೆ.

Apr 13, 2006, 9:41:00 PM  

Post a Comment

<< Home

/* */