ಒಂದೇ ತಲೆಗೆ ಎರಡು ಟೊಪ್ಪಿಗೆ - Hats Off!
ನನ್ನ ಹಿಂದಿನ ಲೇಖನವನ್ನು ಓದಿ ಶಿವ ಎಂಬುವರು ಪ್ರತಿಕ್ರಿಯಿಸಿದ್ದಾರೆ. ಅವರ ಪ್ರತಿಕ್ರಿಯೆ (ಅವರು ಕೇಳದಿದ್ದರೂ) ನನ್ನನ್ನು ನನ್ನ ಲೇಖನಗಳ ಬಗ್ಗೆ ಒಂದು ವಿವರಣೆ ನೀಡುವಂತೆ ಪ್ರಭಾವಬೀರಿದ್ದರಿಂದ, ಅವರ ಪ್ರತಿಕ್ರಿಯೆ ಮತ್ತು ನನ್ನ ವಿವರಣೆ ಎರಡನ್ನೂ ಇಲ್ಲಿ ನೀಡಿದ್ದೇನೆ.
ಶಿವ ಅವರ ಪ್ರತಿಕ್ರಿಯೆ:
ಶಿವ ಅವರ ಪ್ರತಿಕ್ರಿಯೆ:
ಮೊದಲು ಮನೆಗೆ ವಿಜಯಕರ್ನಾಟಕವನ್ನು ತರಿಸುತ್ತಿದ್ದೆ.ವಿಶ್ವೇಶ್ವರ ಭಟ್ ಮಾತ್ರವಲ್ಲ ವರ್ಣರಂಜಿತವಾಗಿ ಬರೆಯೋದು. ಶನಿವಾರ ಪ್ರತಾಪ್ ಸಿಂರ ಅಂಕಣ ಇರುತ್ತದೆ.ಅವರು ಸುಮಾರಾಗಿ ವಿಶ್ವೇಶ್ವರ ಭಟ್, ರವಿ ಬೆಳಗೆರೆಯವರ ಹಾಗೆ ಬರೆಯೋದು.ಈಗ 'ಕನ್ನಡಪ್ರಭ' ತರಿಸುತ್ತಿದ್ದೇನೆ. :-)ನನ್ನ ವಿವರಣೆ:
ಶಿವ ಅವರೇ,
ಪ್ರತಿಕ್ರಿಯೆಗಾಗಿ ವಂದನೆಗಳು. ವಿಜಯ ಕರ್ನಾಟಕಕ್ಕಿಂತ ಕನ್ನಡ ಪ್ರಭ (ಅಥವಾ ಪ್ರಜಾವಾಣಿ/ಸಂಯುಕ್ತ ಕರ್ನಾಟಕ) ಉತ್ತಮವಿರಬಹುದೇ? ನನಗೆ ತಿಳಿದಿಲ್ಲ. ಹಾಗೆಯೇ ಶ್ರೀ ಭಟ್ಟರ ಲೇಖನಗಳಲ್ಲಿ ಇರುವ ಫ್ಯಾಕ್ಚುಯಲ್ ತಪ್ಪುಗಳು ಇತರೆ ಪತ್ರಿಕೆಗಳ/ಲೇಖಕರ ಲೇಖನಗಳಲ್ಲಿ ಇರುವುದಿಲ್ಲವೇ? ಅದೂ ಸಹ ನನಗೆ ತಿಳಿಯದು.
ನನ್ನ ಲೇಖನಗಳು ಬಹುಮಟ್ಟಿಗೆ ವಿಜಯ ಕರ್ನಾಟಕ ಮತ್ತು ಶ್ರೀ ಭಟ್ಟರ ಲೇಖನಗಳ ಬಗ್ಗೆಯೇ ಇದ್ದರೆ ಅದಕ್ಕೆ ಕಾರಣ ಇಂದು ವಿಜಯ ಕರ್ನಾಟಕ ಕನ್ನಡದ ನಂ. ೧ ಪತ್ರಿಕೆಯಾಗಿರುವುದೇ ಆಗಿದೆ.
ಮತ್ತೊಂದು ವಿಚಾರ: ಶ್ರೀ ಭಟ್ಟರ ಲೇಖನಗಳ ಬಗ್ಗೆ ನಾನು ಬರೆಯುವುದೇನೇ ಇರಲಿ, ಪ್ರಜಾವಾಣಿ, ಸಂಯುಕ್ತ ಕರ್ನಾಟಕ, ಕನ್ನಡ ಪ್ರಭಗಳಂತಹ ಎಸ್ಟಾಬ್ಲಿಷ್ಡ್ ದಿನ ಪತ್ರಿಕೆಗಳನ್ನು ಹಿಮ್ಮೆಟ್ಟಿಸಿ ವಿಜಯ ಕರ್ನಾಟಕದಂತಹ ಹೊಸ ದಿನಪತ್ರಿಕೆಯನ್ನು ನಂ. ೧ ಮಾಡಿರುವ ಭಟ್ಟರ ಸಾಧನೆ, ನೈಪುಣ್ಯ ಎಲ್ಲರೂ ಮೆಚ್ಚತಕ್ಕದ್ದೇ. ಹ್ಯಾಟ್ಸ್ ಆಫ್ ಟು ಹಿಮ್!
ಲಕ್ಷಾಂತರ ಮಂದಿ ಓದುಗರಿರುವ ಒಂದು ಪತ್ರಿಕೆಯನ್ನು ನಡೆಸುವುದು ಸುಲಭದ ಮಾತಲ್ಲ. ಸಂಪಾದಕನ ಕೆಲಸ ಪೂರ್ಣಾವಧಿ ಕೆಲಸ. ಸಂಪಾದಕನಿಗೆ ಲೇಖನಗಳನ್ನು ಬರೆಯಲು ಬೇಕಿರುವ ರೀಸರ್ಚ್, ಸಿದ್ಧತೆಗಳನ್ನು ಮಾಡಿಕೊಳ್ಳಲು ಸಮಯ ಸಿಗುವುದು ಕಷ್ಟ. ಭಟ್ಟರು, ಬೆಳಗೆರೆಯಂತಹವರು ಸಂಪಾದಕ/ಲೇಖಕ ಹೀಗೆ ಎರಡೆರಡು ಟೊಪ್ಪಿಗಳನ್ನು ಹೊತ್ತಾಗ ಎರಡೂ ವಿಭಾಗಗಳಲ್ಲಿ ತಪ್ಪುಗಳಾಗುವುದು ನಿಶ್ಚಿತ ಎಂದೇ ನನ್ನ ಅಭಿಪ್ರಾಯ.
ವಂದನೆಗಳೊಂದಿಗೆ,
ಸಂಜಯ