.comment-link {margin-left:.6em;}

ನೂರೆಂಟು ಸುಳ್ಳು (nUreMTu suLLu)

You may not be a "Dhrutharashtra", but we want to be the Sanjaya for you!

Thursday, April 20, 2006

ಕನ್ನಡದಲ್ಲಿ ಏಕಿಲ್ಲ?!

ಓದುಗ ಮಿತ್ರರಾದ "ವಿಶ್ವಪುಟ" ಬ್ಲಾಗಿನ ಶ್ರೀ ವಿಶ್ವನಾಥ ಬಸವನಾಳಮಠ ಒಂದು ಪ್ರಶ್ನೆಯನ್ನು ಕೇಳಿದ್ದಾರೆ. ಇದೇ ಪ್ರಶ್ನೆ ಇತರ ಓದುಗರ ಮನದಲ್ಲೂ ಸುಳಿದಿರಬಹುದೆಂಬ ಅನಿಸಿಕೆಯಿಂದ, ಶ್ರೀ ಬಸವನಾಳಮಠ ಅವರ ಪ್ರಶ್ನೆ ಮತ್ತು ನನ್ನ ಉತ್ತರವನ್ನು ಇಲ್ಲಿ ಪ್ರಕಟಿಸಿದ್ದೇನೆ.

ಶ್ರೀ ಬಸವನಾಳಮಠರವರ ಪ್ರಶ್ನೆ:
ಸಂಜಯ್,
ಕನ್ನಡ ಪತ್ರಿಕೆಗಳ ಕುರಿತ ನಿಮ್ಮ ಟೀಕೆ ಟಿಪ್ಣಣಿಗಳು ಕನ್ನಡದಲ್ಲಿ ಏಕೆ ಇರುವುದಿಲ್ಲ?
ನನ್ನ ಉತ್ತರ:

ವಿಶ್ವನಾಥರವರೇ,

ನನ್ನ ಬ್ಲಾಗಿಗೆ ಭೇಟಿ ಇತ್ತದ್ದಕ್ಕೆ ಧನ್ಯವಾದಗಳು.

ಇನ್ನು ನಿಮ್ಮ ಪ್ರಶ್ನೆಗೆ ಉತ್ತರ. ಒಂದೇ ಪದದಲ್ಲಿ ಹೇಳ ಬೇಕೆಂದರೆ: ಸೋಮಾರಿತನ.

ನನ್ನ ಬ್ಲಾಗನ್ನು ಪ್ರಾರಂಭಿಸಿದಾಗ ಯೂನಿಕೋಡ್ ಉಪಯೋಗಿಸಿ ಕನ್ನಡದಲ್ಲಿ ಬರೆಯುವ ಸಾಧ್ಯತೆ ಇದೆಯೆಂದು ನನಗೆ ತಿಳಿದಿರಲಿಲ್ಲ. ಹಾಗಾಗಿ ಇಂಗ್ಲೀಷಿನಲ್ಲಿ ಬರೆಯಲು ಪ್ರಾರಂಭಿಸಿದೆ. ಅದರ ಜೊತೆಗೆ, ಕಳೆದ ೧೮ ವರ್ಷಗಳಿಂದ ಕರ್ನಾಟಕದ ಹೊರಗೆ (೧೬ ವರ್ಷಗಳಿಂದ ಭಾರತದ ಹೊರಗೆ) ವಾಸಿಸುತ್ತಿರುವುದರಿಂದ ಕನ್ನಡದಲ್ಲಿ ಬರೆಯಲು ಕಷ್ಟವೆನಿಸಿತು. ಚಕ್ಕನೆ ಹೊಳೆಯುವ ಇಂಗ್ಲೀಷ್ ಪದಗಳ ಕನ್ನಡ ಅವತರಣಿಕೆಗೆ ಪದೇ ಪದೇ ಡಿಕ್ಷನರಿ ಮೊರೆ ಹೋಗುವುದು ತೊಂದರೆ ಎನಿಸಿತು.

ನಾನಿನ್ನೂ ಭಾರತದ ಹೊರಗೇ ವಾಸಿಸುತ್ತಿದ್ದರೂ, ಯೂನಿಕೋಡ್ ಮೂಲಕ ಕನ್ನಡದಲ್ಲಿ ಬರೆಯುವ ವಿಧಾನ ಈಗ ನನಗೆ ತಿಳಿದಿದೆ. ಆದರೆ, ಸೋಮಾರಿತನ ಮಾತ್ರ ಇನ್ನೂ ಉಳಿದಿದೆ.

ವಂದನೆಗಳೊಂದಿಗೆ,

"ಸಂಜಯ"

1 Comments:

Blogger Vishwanath said...

ಶ್ರೀ ಸಂಜಯರೇ,
ಇನ್ನು ಮೇಲಾದರೂ ಆ ಸೋಮಾರಿತನವನ್ನು ಹೋಗಲಾಡಿಸಿ, ಕನ್ನಡದಲ್ಲೇ ಬರೆಯುತ್ತೀರಿ ಎಂದು ಆಶಿಸುವೆ. ನಿಮ್ಮ ವಿಶ್ಲೇಷಣಾತ್ಮಕ ಪೋಸ್ಟ್ ಗಳು ಕನ್ನಡದಲ್ಲಿದ್ದರೇ ಚೆಂದ.

Apr 21, 2006, 7:55:00 AM  

Post a Comment

<< Home

/* */