.comment-link {margin-left:.6em;}

ನೂರೆಂಟು ಸುಳ್ಳು (nUreMTu suLLu)

You may not be a "Dhrutharashtra", but we want to be the Sanjaya for you!

Sunday, June 18, 2006

Kannada Prabha: Last In Translation?

[Without a note of irony some one criticised us by saying "criticising is easy". In that spirit, we are going for easy criticisms here. We really like it easy.]

Just the other day we mentioned about Kannada Prabha's creative translation of Singer's Nobel speech. Today we saw some more.

Here is TJS George's article in English. And here is the version as translated by Kannada Prabha.

In his article, George mentions about a political play "The New Statesman, Episode 2006. The Blair B'stard Project.", for some reason, in the Kannada translation it becomes 'ದ ನ್ಯೂ ಸ್ಟೇಟ್ಸ್‌ಮನ್, ಎಪಿಸೋಡ್ ೨೦೦೬ (ಹೊಸ ರಾಜನೀತಿಜ್ಞ, ಅಧ್ಯಾಯ ೨೦೦೬) -'ಬ್ಲೇರ್ -ಬುಷ್ ತಾರಾ ಅಭಿನಯ ಯೋಜನೆ'

Later in his article, George mentions about "Hundreds of murderers, rapists and thieves escaped from some of Britain's open prisons ". But Kannada Prabha translates it as "ನೂರಾರು ಮಂದಿ ಕೊಲೆಗಡುಕರು, ವ್ಯಭಿಚಾರಿಗಳು, ಕಳ್ಳಕಾಕರು ಬ್ರಿಟನ್ನಿನ ಕೆಲ ಬಯಲು ಬಂದೀಖಾನೆಗಳಿಂದ ಪರಾರಿಯಾದರು." I do hope that the good folks at Kannada Prabha know the difference between "rape" and "ವ್ಯಭಿಚಾರ".

While the word "escape" could some times be translated as "ಪರಾರಿ", not in this case. "ಪರಾರಿ" changes the meaning entirely. It implies that these criminals ran away. But the fact is, they were allowed to walk free after completing their sentences.

The "escape" here is not about running away from open prisons, but about serving the sentence and then being allowed to walk free instead of being deported to their native countries. (In fairness to K.P., we have to mention that the next setence in the article makes context a bit more clear. But, not clear enough.)

There are something else about this article. No, they are not about Kannada Prabha's abilities (or lack of them) of translations.

While on the topic of the political play, George writes about the "anger of the playwright and of those who flock to see the show.". The fact is, the play is a satire. Even a farce. If the playwright is any good, those who flock to see should see the British Prime Minister Blair as an object of ridicule rather than one of anger.

In his article, George mentions about the "mutiny" of British Civil Servants and about the freeing of thousands of foreign criminals who should have been considered for deportation. If one reads George's article they appear to be two separate events, both undermining Tony Blair's credibility. Note that in George's telling the "mutiny" is mentioned first and then the freeing of the criminals.

But, the fact is, as reported here in the Daily Mail, the head of the Civil Servant's association's "mutiny" seems to have been at least as a reaction to the criminal freeing fiasco.

Do any of these matter? We say, decide for yourselves.

23 Comments:

Anonymous Anonymous said...

Sanjay,
This is stupid. It is easy to find mistakes. You have sickening mind. Nimma haage vichaara maadtaa kootre patrike horabaralla sanjayaa

Jun 18, 2006, 2:57:00 PM  
Anonymous Anonymous said...

Sanjaya,
This is too much. One day you will find fault with your parents who "scripted" your being.
Your blog is a non sense.

Jun 18, 2006, 3:02:00 PM  
Anonymous Anonymous said...

I agree with both of you. The very aim of this blog is to find fault with others. Sanjaya thinks that he is a Brihaspathi. Stop this nasty blog

Jun 18, 2006, 10:30:00 PM  
Anonymous Anonymous said...

Dear Sanjay,

On seeing these fiery comments I feel that your blog risen a level up.Now u can claim that u can also arouse anger in people like Mr Belegere in his TV shows and his articles :-). Your article on thatskannada.com countering Mr Belegere's thoughts was very good. I feel that the "non-sense" written here makes sense.Keep it going.

Jun 19, 2006, 9:16:00 AM  
Blogger v.v. said...

Anonymous, Suma Subba Rao, Jayant,

Thanks for reading my blog and expressing your opinions.

We obviously have different expectations from our newspapers.

I will leave it at that.

Srikant,
Thanks for your words of support.

Ravi Belagere's article did indeed bring in many new readers. Hopefully at least a few of them will find this blog interesting even if they disagree with what's in here.

Regards

Jun 19, 2006, 10:35:00 AM  
Anonymous Anonymous said...

ಸಂಜಯ,
ನೀನು ಮಹಾ ಅವಿವೇಕಿ ಅಂದವರಿದ್ದಾರೆ. ದಡ್ಡ ಅಂದವರಿದ್ದಾರೆ. ನನಗೆ ಹಾಗೆ ನಿನ್ನನ್ನು ಕರೆಯುವುದಕ್ಕೆ ಇಷ್ಟವಿಲ್ಲ. ಯಾಕೆಂದರೆ ನಿನ್ನದು ಕಾಯಿಲೆ. ವಾಸಿಯಾಗದ ಕೆರೆತದ ಕಾಯಿಲೆ.

ನೀನೊಬ್ಬ ವಿದೇಶದಲ್ಲಿ ಕುಳಿತರೂ ಕನ್ನಡಪ್ರೇಮ ಇದೆ ಎಂದು ತೋರಿಸಿಕೊಳ್ಳಲು ಇಚ್ಚಿಸುವ ಸ್ಯೂಡೋ. ಕನ್ನಡದಲ್ಲೊಂದು ಗಾದೆ ಇದೆ. ಕೊಂಚ ಅಶ್ಲೀಲವಾಗಿದೆ. ತಡೆದುಕೋ- ಗುಡ್ಡಕ್ಕೆ ಶಾಟ ಕಟ್ಟಿ ಎಳೆದ ಹಾಗೆ ಅಂತ. ಬಂದರೆ ಗುಡ್ಡ, ಹೋದರೆ ಶಾಟ ಎನ್ನುವ ಧೋರಣೆಯವನು ನೀನು. ಮಂಗನ ಕೈಗೆ ಮಾಣಿಕ್ಯ ಸಿಕ್ಕಂತೆ ನಿನ್ನ ಕೈಗೆ ಬ್ಲಾಗ್ ಸಿಕ್ಕಿದೆ. ಬ್ಲಾ...ಬ್ಲಾ..ಬ್ಲಾ ಅನ್ನುತ್ತೀಯ. ಅನ್ನು.

ಪತ್ರಿಕೆ ಅಂದರೆ ನಿತ್ಯ ಹುಟ್ಟಿ ನಿತ್ಯ ಸಾಯುವಂಥದ್ದು. ಅದರಲ್ಲಿ ಮುಖ್ಯವಾಗಿ ಬೇಕಾದದ್ದು ಸುದ್ದಿ. ಸುದ್ದಿಯನ್ನಷ್ಟೇ ಓದುತ್ತಾನೆ. ಉಳಿದದ್ದನ್ನು ಬಿಡುತ್ತಾನೆ. ನಿನ್ನ ಟೀಕೆಯಲ್ಲೇ ನೂರೆಂಟು ತಪ್ಪುಗಳಿವೆ. ಅದನ್ನು ತಿದ್ದಿಕೋ ಎಂದೂ ಕೂಡ ನಾನು ಹೇಳುವುದಿಲ್ಲ. ಹಾಳಾಗಿ ಹೋಗು.

ಅನುವಾದದಲ್ಲಿ ಒರಿಜಿನಲ್ಲಿಗೆ ನಿಷ್ಠನಾಗಿರಬೇಕು ಅಂತ ನಿನಗೆ ಯಾರಯ್ಯಾ ಹೇಳಿದವರು. ಹೇಳಬೇಕಾದದ್ದು ಹೇಳಲ್ಪಟ್ಟರೆ ಸಾಕು. ಅರ್ಥ ಆದರೆ ಸಾಕು.

ರವಿ ಬೆಳಗೆರೆಯ ಬಗ್ಗೆ ಬರೆದಿದ್ದೀಯಾ. ಅವರ ಸೀಟಲ್ಲಿ ಒಂದು ನಿಮಿಷ ಕುಳಿತು ನೋಡು. ನವರಂಧ್ರಗಳಲ್ಲಿ ಹೇತುಕೊಂಡು ಓಡಿಹೋಗುತ್ತೀಯ. ಆಗ ಗೊತ್ತಾಗುತ್ತದೆ ಪತ್ರಿಕೋದ್ಯಮ ಅಂದರೇನು ಅಂತ.

ವಿಶ್ವೇಶ್ವರ ಭಟ್ಟರ ಬಗ್ಗೆ ಬರೆದಿದ್ದೀಯಾ. ಅವರ ತಪ್ಪುಗಳನ್ನು ಹುಡುಕುವ ಮುನ್ನ ಪತ್ರಿಕೆಯನ್ನೇ ಓದದ ಮಂದಿಗೆ ಅವರು ಪತ್ರಿಕೆ ಓದಿಸಿದ್ದಾರೆ ನೆನಪಿಡು.

ಕನ್ನಡಪ್ರಭದ ಬಗ್ಗೆ ಬರೆದಿದ್ದೀಯಾ. ಒಮ್ಮೆ ಕನ್ನಡಪ್ರಭದತ್ತ ಕಣ್ಣುಹಾಯಿಸು.

ಕಾಯಿಲೆಗೆ ಮದ್ದು ಮಾಡಿಕೋ.

ಅನುಕಂಪದಿಂದ

ಕೆ. ಎಸ್. ಕರುಣಾಕರ

Jun 19, 2006, 1:43:00 PM  
Blogger Sarathy said...

ಮಿಸ್ಟರ್ ಕರುಣಾಕರ, ನಿಜಕ್ಕೂ ಕರುಣಾಜನಕವಾಗಿದೆ ನಿಮ್ಮ ಪ್ರಲಾಪ. ಒಬ್ಬರು ಒಂದು ತಪ್ಪು ಎತ್ತಿ ತೋರಿಸಿದಾಗ ಅದು ಎಂತಹ ತಪ್ಪು ಎಂಬುದನ್ನು ಮೊದಲು ವಿಚಾರ ಮಾಡಿ. ಆ ತಪ್ಪು ತಪ್ಪೇ ಅಥವಾ ತಪ್ಪು ಎತ್ತಿ ತೋರಿಸಿದ್ದವರದ್ದೇ ತಪ್ಪೇ? ಎತ್ತಿ ತೋರಿಸಿರುವ ತಪ್ಪು ನಿಜಕ್ಕೂ ತಪ್ಪಿಲ್ಲದಿದ್ದರೆ ಅದು ತಪ್ಪಿಲ್ಲ ಎಂದು ನೀವು ಎತ್ತಿತೋರಿಸಿ. ಅದು ಬಿಟ್ಟು ಶಾಟ, ಗುಡ್ಡ ಎಂದು ಬೆಟ್ಟ ಹತ್ತುತ್ತಿದ್ದೀರಲ್ಲಾ!!!

ಸಂಜಯರವರೇ, ನೀವು ಎತ್ತಿ ತೋರಿಸಿರುವ ತಪ್ಪು ನಿಜಕ್ಕೂ ಎತ್ತಿತೋರಿಸುವಂಥವಲ್ಲ ಎಂದು ನನ್ನ ಅನಿಸಿಕೆ. ಅತ್ಯಾಚಾರ ಕೂಡ ಒಂದು ವ್ಯಭಿಚಾರವೇ. ಅಥವಾ ವ್ಯಭಿಚಾರ ಕೂಡ ಒಂದು ಅತ್ಯಾಚಾರ... ಪರಾರಿಯಾಗುವುದು ಹಾಗೂ ತಪ್ಪಿಸಿಕೊಳ್ಳುವುದರಲ್ಲಿ ಅಂತಹ ಅಗಾಧ ವ್ಯತ್ಯಾಸವಿಲ್ಲ ಎಂದು ನನ್ನ ಬುದ್ಧಿಗೆ ತೋಚುತ್ತಿದೆ. ನಾನು ತಪ್ಪನ್ನು ಸಮರ್ಥಿಸಿಕೊಳ್ಳುತ್ತಿಲ್ಲ....

Jun 20, 2006, 1:49:00 AM  
Anonymous Anonymous said...

ವಿಜಯ ಸಾರಥಿಯವರಿಗೆ ನಮಸ್ಕಾರ,
ನಿಮ್ಮ ಸಿನಿಮಾ ವಿಮರ್ಶೆಗಳನ್ನು ನಾನು ಓದುತ್ತಿರುತ್ತೇನೆ. ತಾವು ಕನ್ನಡದಲ್ಲಿ ಬರೆಯಬಲ್ಲಿರಿ ಎಂದು ಗೊತ್ತಿರಲಿಲ್ಲ. ನಿಮ್ಮ ಪರಿಚಯ ಆದದ್ದು ಸಂತೋಷ.

ನನ್ನ ಪತ್ರದಿಂದ ನೋವಾಗಿದ್ದರೆ ಕ್ಷಮಿಸಿ. ಆದರೆ ಬರೀ ತಪ್ಪುಗಳನ್ನೇ ಎತ್ತಿತೋರಿಸಿದಾಗ ನನಗೆ ಮೊಸರನ್ನದಲ್ಲಿ ಕಲ್ಲು ಸಿಕ್ಕಂತಾಗುತ್ತದೆ. ಅದೆಲ್ಲ ಅಂಥ ದೊಡ್ಡ ತಪ್ಪೇನಲ್ಲ. ನಿಜವಾಗಿಯೂ ಫ್ಯಾಕ್ಚುಯಲ್ ತಪ್ಪುಗಳನ್ನು ಮಾಡಿದಾಗ ಹೇಳಲಿ, ಪರವಾಗಿಲ್ಲ.

ನಾನೇನೂ ಕನ್ನಡ ಪತ್ರಕರ್ತರಿಗೆ ಮಾರ್ಜಿನ್ ಕೊಡಿ ಅಂತ ಕೇಳುತ್ತಿಲ್ಲ. ಆದರೆ ಕನಿಷ್ಠ ಪ್ರಜ್ಞೆ ಇಟ್ಟುಕೊಂಡು ನೋಡಿ. ಇಂಗ್ಲಿಷಿನಿಂದ ಕನ್ನಡಕ್ಕೆ ಕೆಲವು ವಾಕ್ಯಗಳನ್ನು ಅನುವಾದಿಸುವುದು ಸಾಧ್ಯವೇ ಇಲ್ಲ. ಕನ್ನಡದಿಂದ ಇಂಗ್ಲಿಷಿಗೆ ಕೂಡ.

ನಾವು ಹಳ್ಳಿಯವನು. ನನ್ನ ಭಾಷೆ ಕೊಂಚ ಒರಟು. ಹಾಗಿದ್ದಾಗಲೇ ನಾವು ನಮ್ಮತನ ಉಳಿಸಿಕೊಳ್ಳುತ್ತೇವೆ. ಇಲ್ಲದೇ ಹೋದರೆ ಅದು ಪಂಡಿತರ ಭಾಷೆಯಾಗಿ ಸತ್ವಹೀನ ಆಗುತ್ತದೆ.

ಟೀಕಿಸುವವರು ಹಾಳಾಗಿ ಹೋಗಲಿ, ನಿಮ್ಮ ಕೈಂಕರ್ಯ ಹೇಗೆ ಸಾಗಿದೆ. ಹೇಗಿದೆ ಕನ್ನಡ ಸಿನಿಮಾರಂಗ. ನಾನಂತೂ ಸಿನಿಮಾ ನೋಡುವುದನ್ನು ಬಿಟ್ಟೇ ಬಿಟ್ಟಿದ್ದೇನೆ. ಇತ್ತೀಚೆಗೆ ಹೈದರಾಬಾದಿಗೆ ಬಂದಿದ್ದ ರಿಷಿ ಎಂಬ ಸಿನಿಮಾ ನೋಡಿದೆ. ಟೀವಿ ಸೀರಿಯಲ್ಲಿನ ಹಾಗಿತ್ತು. ನೀವು ಅದನ್ನು ಮೆಚ್ಚಿ ಬರೆದದ್ದನ್ನು ಓದಿದ ನೆನಪು.

ಕರುಣಾಕರ ಕೆ ಎಸ್

Jun 20, 2006, 2:01:00 AM  
Blogger Sarathy said...

ಕರುಣಾಕರರವರೇ, ದಯವಿಟ್ಟು ಕ್ಷಮಿಸಿ. ನಾನು ನೀವಂದುಕೊಂಡ ಆ ವಿಜಯಸಾರಥಿ ಅಲ್ಲ. ಏನ್ಮಾಡೋದು...ಐಡೆಂಟಿಟಿ ಕ್ರೈಸಿಸ್. ಅವರಿಗೂ ನನಗೂ ಇರುವ ಒಂದೇ ಸಾಮ್ಯವೆಂದರೆ ಸಿನಿಮಾ. ಅವರು ಸಿನಿಮಾ ಬಗ್ಗೆ ಬರೆಯುತ್ತಾರೆ. ನಾನು ಸಿನಿಮಾಗಳನ್ನು ಬರೇ ನೋಡುತ್ತೇನೆ...

ಹೋಗಲಿ ಬಿಡಿ... ನೀವು ಹಳ್ಳಿಯಿಂದ ಬಂದವರು ಹಾಗಾಗಿ ನೀವು ಒರಟಾಗಿ ಬರೆಯುತ್ತೀರಿ ಎಂದು ಹೇಳಿಕೊಂಡಿದ್ದೀರಿ. ಆದರೆ ನಿಜ ಏನು ಅಂದರೆ ಪ್ರತಿಯೊಬ್ಬ ವ್ಯಕ್ತಿ ಕೂಡ ಹಳ್ಳಿಯಿಂದಲೇ ಬಂದವನು.

Jun 20, 2006, 5:14:00 AM  
Anonymous Anonymous said...

ಮೊದಲಿನಿಂದ ಈ ಬ್ಲಾಗನ್ನು ಓದುತ್ತಿದ್ದೇನೆ..ಆದರೆ ಇಷ್ಟೊಂದು ಕಮೆಂಟನ್ನು ಯಾವತ್ತು ನೋಡಿರಲಿಲ್ಲ. hm..
ಮುಂದಿನ 'ನೂರೆಂಟು ಸುಳ್ಳು' ಸಂಚಿಕೆಯನ್ನು ಕಾತುರದಿಂದ ಕಾಯುತ್ತಿರುವ,

ಶಿವ ...

Jun 20, 2006, 9:13:00 AM  
Anonymous Anonymous said...

ಸಂಜಯ, ನಿಮ್ಮ ಬ್ಲಾಗನ್ನು ಕನ್ನಡ ಪತ್ರಿಕೋದ್ಯಮದ ಹಲವಾರು ಮಂದಿ ಓದುತ್ತಿದ್ದಾರೆ.ಫ್ಯಾಕ್ಚುಯಲ್ ತಪ್ಪುಗಳಷ್ಟೇ ತಪ್ಪುಗಳಲ್ಲ. ಭಾಷೆಯ ಬಳಕೆಯಲ್ಲಿನ ತಪ್ಪುಗಳೂ ತಪ್ಪುಗಳೇ. ಅದರ ಕಡೆಗೂ ನೀವು ಗಮನ ಹರಿಸಿರುವುದು ಒಳ್ಳೆಯದು. ನಿಮ್ಮ ಟೀಕೆಯ ವಿಸ್ತಾರ ಮತ್ತಷ್ಟು ಹೆಚ್ಚು ಮಾಡಿಕೊಳ್ಳಿ. ರಾಜ್ಯಕ್ಕೆ, ಜನತೆಗೆ ಬೇಕಾದ ಎಷ್ಟೋ ಸುದ್ದಿಗಳು ಪ್ರಕಟ ಆಗುವುದೇ ಇಲ್ಲ. ಆದರೆ, ಕ್ಷುಲ್ಲಕ ಸುದ್ದಿಗಳು ಫ್ರಂಟ್ ಪೇಜಿನ್ನಲ್ಲಿರುತ್ತವೆ. ಟೈಮ್ಸ್ ಆಫ್ ಇಂಡಿಯಾ ಕೊಂಡಿರುವ ವಿಜಯ ಕರ್ನಾಟಕವನ್ನು ಇನ್ನು ಮುಂದೆ ದೇವರೇ ರಕ್ಷಿಸಬೇಕು. ಕನ್ನಡಕ್ಕೆ ಒಬ್ಬ ಮೀಡಿಯಾ ವಾಚ್‌ಡಾಗ್ ಅವಶ್ಯಕತೆ ಇದೆ. ನಿಮ್ಮ ಬ್ಲಾಗಿನ ವಿಸ್ತಾರ ಹೆಚ್ಚಾದರೆ, ನೀವು ಆ ಕೆಲಸ ಮಾಡಬಹುದು.

ವಿಜಯಸಾರಥಿ, ನೀವು "ಪರಾರಿ"ಯ ಹಿಂದಿನ ಸಂಗತಿಗೆ ಗಮನ ನೀಡಿಲ್ಲವೆಂದು ಕಾಣುತ್ತದೆ. ಜೈಲು ಶಿಕ್ಷೆಯ ನಂತರ ದೇಶದಿಂದ ಗಡೀಪಾರಾಗಬೇಕಿದ್ದ ಖೈದಿಗಳನ್ನು ಟೋನಿ ಬ್ಲೇರ್ ಸರ್ಕಾರ ಬಿಡುಗಡೆ ಮಾಡಿತು. ಅದು ಕನ್ನಡ ಪ್ರಭದಲ್ಲಿ "ನೂರಾರು ಮಂದಿ ಕೊಲೆಗಡುಕರು, ವ್ಯಭಿಚಾರಿಗಳು, ಕಳ್ಳಕಾಕರು ಬ್ರಿಟನ್ನಿನ ಕೆಲ ಬಯಲು ಬಂದೀಖಾನೆಗಳಿಂದ ಪರಾರಿಯಾದರು" ಎಂದರೆ ತಪ್ಪಲ್ಲವೇ? "ರೇಪ್" ಪದಕ್ಕೆ, "ವ್ಯಭಿಚಾರ"ಕ್ಕಿಂತ "ಅತ್ಯಾಚಾರ" ಸೂಕ್ತವಲ್ಲವೇ? "ಅತ್ಯಾಚಾರ"ವೂ "ವ್ಯಭಿಚಾರ"ವೇ ಇರಬಹುದು, ಆದರೆ, ಎರಡೂ ಒಂದೇ ಅಲ್ಲ. ಒಂದು ಇನ್ನೊಂದಕ್ಕಿಂತ ಹೀನ. ಬೇಕಿದ್ದರೆ, ಯಾರಾದರೂ ಹೆಂಗಸರಲ್ಲಿ ವಿಚಾರಿಸಿ. ಕನ್ನಡ ಭಾಷೆಯ ಬಳಕೆಯ ಬಗ್ಗೆ ಕನ್ನಡ ದಿನಪತ್ರಿಕೆಗಳು ತಲೆ ಕೆಡಿಸಿಕೊಳ್ಳದಿದ್ದರೆ, ಬೇರೆ ಯಾರು ಗಮನ ಕೊಡಬೇಕು? ಟೈಮ್ಸ್ ಆಫ್ ಇಂಡಿಯಾದ ಮಾರ್ವಾಡಿಗಳೇ?

ಕರುಣಾಕರ್, ನಿಮಗೆ ಸಂಜಯರ ಬ್ಲಾಗ್ ಇಷ್ಟವಿಲ್ಲದಿದ್ದರೆ, "ಇಷ್ಟವಿಲ್ಲ" ಎಂದು ಬರೆಯುವುದು ಬಿಟ್ಟು, "ಕೆರೆತದ ಕಾಯಿಲೆ", "ಸೂಡೋ ಕನ್ನಡ ಪ್ರೇಮ", "ಹಾಳಾಗಿ ಹೋಗು", ಏಕ ವಚನ ಪ್ರಯೋಗ, ಅಶ್ಲೀಲ ಮಾತುಗಳು ಬರೆದು, ಈಗ, "ಹಳ್ಳಿಯ ಭಾಷೆ" ಎಂದು ಸಮರ್ಥಿಸಿಕೊಳ್ಳುವುದು ಹಾಸ್ಯಾಸ್ಪದವಾಗಿದೆ.

ಸಂಜಯ, ಮೊಸರಿನಲ್ಲಿ ಕಲ್ಲು ಹುಡುಕುವ ನಿಮ್ಮ ಪ್ರವೃತ್ತಿಯನ್ನು ಬಿಡಬೇಡಿ. ಸಣ್ಣ-ಪುಟ್ಟ ತಪ್ಪುಗಳನ್ನು ತೋರಿಸುವುದರ ಜೊತೆಗೇ, ನಿಮ್ಮ ಬ್ಲಾಗಿನ ಹರವನ್ನು ಮತ್ತಷ್ಟು ವಿಸ್ತರಿಸಿ. ಕೊಂಚ ಮಹತ್ವಾಕಾಂಕ್ಷೆ ಬೆಳೆಸಿಕೊಳ್ಳಿ.

Jun 20, 2006, 10:13:00 AM  
Anonymous Anonymous said...

Sanjay,
Finding fault should not be the aim and objective of any person. The very taste of your blog is sickening. Write something good about Kannada journalism.

Jun 20, 2006, 10:57:00 AM  
Anonymous Anonymous said...

ಪ್ರಿಯ ಅನಾಮಿಕ,

ನಾನು ಪತ್ರಿಕೋದ್ಯಮವನ್ನು ಸಮರ್ಥಿಸಿಕೊಳ್ಳುತ್ತಿಲ್ಲ. ಅದರ ಬಗ್ಗೆ ನನಗೆ ಆಸಕ್ತಿಯಿಲ್ಲ. ಒಬ್ಬ ಓದುಗನಾಗಿ ನಾನು ಪತ್ರಿಕೆಯನ್ನೇ ಇಡಿಯಾಗಿ ನಂಬುವುದಿಲ್ಲ. ನನಗೆ ಬೇರೆ ಸೋರ್ಸುಗಳಿವೆ. ಅವುಗಳ ಮುಖಾಂತರ ನಾನು ನನಗೆ ಬೇಕಾದ ಮಾಹಿತಿಗಳನ್ನು ಕ್ರಾಸ್ ಚೆಕ್ ಮಾಡಿಕೊಳ್ಳುತ್ತೇನೆ.

ಸನ್ಮಾನ್ಯ ಸಂಜಯ ಅವರು ( ತಮಗೆ ಒರಟು ಭಾಷೆ ಹಿಡಿಸುವುದಿಲ್ಲ ತಾನೇ) ತಪ್ಪುಗಳನ್ನು ಹುಡುಕುವ ಕೆಲಸ ಮಾಡುತ್ತಿದ್ದಾರೆ. ಮತ್ತಷ್ಟು ಮಾಡಬೇಕು ಎಂದು ತಾವು ಬಯಸಿದ್ದೀರಿ. ಸಂತೋಷ. ಆದರೆ ಅದೇ ಹವ್ಯಾಸವಾಗಿ ಚಾಳಿಯಾಗಿ ಕಾಯಿಲೆಯಾಗಿ ಹೋದರೆ ಕಷ್ಟ. ನಮ್ಮಲ್ಲಿ ಅಂಥವರು ಅನೇಕರು ಇದ್ದಾರೆ. ಅಂಥವರ MOOLA VYADHIಗೆ ಮದ್ದಿಲ್ಲ.

ಪತ್ರಿಕೆಗಳು ಬಹುಮಟ್ಟಿಗೆ ಸತ್ಯವನ್ನೇ ಹೇಳಲು ಯತ್ನಿಸುತ್ತವೆ. ಪತ್ರಿಕೆಗಳ ಮೌಲ್ಯಮಾಪನ ಮತ್ತು ಆಯ್ಕೆ ದಿನದಿನವೂ ನಡೆಯುತ್ತದೆ. ರಾಜಕಾರಣಿಯನ್ನು ಆರಿಸಿದರೆ ಮರು ಆಯ್ಕೆಗೆ ಐದು ವರುಷ ಕಾಯಬೇಕು. ಆದರೆ ಪತ್ರಿಕೆ ಹಾಗಲ್ಲ. ಸರಿಯಿಲ್ಲ ಅನ್ನಿಸಿದರೆ ಮರುದಿನ ಬೆಳಗ್ಗೆಯೇ ಪತ್ರಿಕೆ ಬದಲಾಯಿಸಬಹುದು.

ತಾವು ಸೂಚಿಸಿದ ವಿಜಯ ಕರ್ನಾಟಕ ಮತ್ತು ಟೈಮ್ಸಾಫಿಂಡಿಯ ಪತ್ರಿಕೆಗಳನ್ನು ಓದುತ್ತಿರುವವರೂ ಕನ್ನಡಿಗರೆ. ಎರಡು ಕೂಡ ಅತ್ಯಂತ ಹೆಚ್ಚು ಪ್ರಸಾರ ಇರುವ ಪತ್ರಿಕೆಗಳು. ಅವುಗಳಲ್ಲಿ ಸುಳ್ಳು ಪ್ರಕಟವಾಗುತ್ತಿದೆ ಅಂತ ಗೊತ್ತಿದ್ದೂ ಅದನ್ನು ಓದುಗ ಯಾಕೆ ಓದುತ್ತಾನೆ. ಓದುಗನಿಗೂ ಅದನ್ನೆಲ್ಲ ನೋಡುವ ವ್ಯವಧಾನವಿಲ್ಲ.

ಬಿಟ್ಟಿ ಬ್ಲಾಗುಗಳಲ್ಲಿ ಯಾರದೋ ಹೊತ್ತ್ಲಲ್ಲಿ, ಯಾರದೋ ದುಡ್ಡಲ್ಲಿ ಯಾವುದೋ ಕಛೇರಿಯಲ್ಲಿ ಕುಳಿತುಕೊಂಡು ತಪ್ಪು ಹುಡುಕುವುದು ಸುಲಭ. ರಾತ್ರೋರಾತ್ರಿ ಸುದ್ದಿಗಳನ್ನು ಸಂಗ್ರಹಿಸಿ, ಪರಿಶೀಲಿಸಿ, ಮುದ್ರಿಸಿ ಬೆಳಗ್ಗೆ ಹೊತ್ತಿಗೆ ಅದನ್ನು ಮಾರುಕಟ್ಟೆಗೆ ಬಿಡುವ ಕಷ್ಟವನ್ನು ನಾನು ಬಲ್ಲೆ.

ಹಳೆಯ ಕಾಲದ ಪತ್ರಿಕೋದ್ಯಮ ಪವಿತ್ರ ಅನ್ನುವವರಿಗೊಂದು ಕಿವಿಮಾತು. ಆಗ ಇದ್ದದ್ದೇ ಒಂದೋ ಎರಡೋ ಪತ್ರಿಕೆಗಳು. ಅವುಗಳನ್ನು ಕೊಳ್ಳುವುದನ್ನು ಬಿಟ್ಟರೆ ಬೇರೆ ದಾರಿಯೇ ಇರಲಿಲ್ಲ. ಅನೇಕ ಪೂರ್ವಸೂರಿ ಪತ್ರಕರ್ತರು ಕಛೇರಿಯಲ್ಲೇ ಕುಳಿತು ಎಷ್ಟೋ ಕಾರ್ಯಕ್ರಮಗಳನ್ನು ವರದಿ ಮಾಡಿದ್ದೂ ಇದೆ. ಆಗ ಕ್ರಾಸ್ ಚೆಕ್ ಮಾಡುವುದಕ್ಕೆ ಬೇರೆ ಮಾರ್ಗಗಳೇ ಇರಲಿಲ್ಲ.

ಈಗ ಟೀವಿ ಬಂದಿದೆ. ಅದೇ ಸುಳ್ಳು ಹೇಳುತ್ತದೆ. ರಾಖೀ ಸಾವಂತ್ ಮತ್ತು ಮಿಕಾ ಸಿಂಗ್ ಚುಂಬನದ ಸನ್ನಿವೇಶದಿಂದ ಹಿಡಿದು ಆನೇಕಲ್ ಸಾಬಿ, ತನ್ನ ಅಕ್ಕನ ಕತ್ತನ್ನೇ ಕತ್ತರಿಸಿ ಅದನ್ನು ಹಿಡಕೊಂಡು ಊರೆಲ್ಲ ಅಡ್ಡಾಡಿದ್ದನ್ನು ಪ್ರಸಾರ ಮಾಡುತ್ತದೆ. ಪತ್ರಿಕೆಗೆ ಸುದ್ದಿಮಾಡಲು ಏನು ಉಳಿದಿರುತ್ತದೆ ಹೇಳಿ.

ಇವೆಲ್ಲವೂ ಪತ್ರಕರ್ತ ಮಾಡಿದ ತಪ್ಪುಗಳನ್ನು ಸಮರ್ಥಿಸಿಕೊಳ್ಳುತ್ತದೆ ಅಂತೇನಲ್ಲ. ಆದರೆ ತಪ್ಪು ಅನ್ನೋದು ಜನಕ್ಕೆ ತಾನೇ ತಾನಾಗಿ ಗೊತ್ತಾಗುತ್ತದೆ. ಅದನ್ನು ಎತ್ತಿ ತೋರಿಸುವುದನ್ನೇ ಯಾರೂ ಉದ್ಯೋಗ ಆಗಿಸಿಕೊಳ್ಳುವ ಅಗತ್ಯ ಇಲ್ಲ.

ಆಲೋಚಿಸಿ. ಮತ್ತೂ ಸಂಜಯನೇ ಸರಿ ಅನ್ನಿಸಿದರೆ...
ಮತ್ತದೇ ಹಳೇ ಪದ....
ಹಾ... ಹೋ..

ಕರುಣಾಕರ ಕೆ. ಎಸ್.

Jun 20, 2006, 10:55:00 PM  
Blogger v.v. said...

ಕರುಣಾಕರ ಕೆ. ಎಸ್., ವಿಜಯ ಸಾರಥಿ, ಶಿವ, ಅನಾಮಿಕ, ಡಾ.ಸುರೇಶ್ ಕುಮಾರ್,

ನನ್ನ ಬ್ಲಾಗ್ ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

ಕರುಣಾಕರ, ಸುರೇಶ್ ಕುಮಾರ್,
ನನ್ನ ಬ್ಲಾಗ್ ನಿಮಗಿಷ್ಟವಿಲ್ಲ. ಕ್ಷಮಿಸಿ.

ಸಾರಥಿಯವರೇ,
"ಪರಾರಿ", "ವ್ಯಭಿಚಾರ" ಪದಗಳ ಬಳಕೆಯ ವಿಷಯ ನನಗಿಂತ ಚೆನ್ನಾಗಿ "ಅನಾನಿಮಸ್" ಹೇಳಿದ್ದಾರೆ. ಅದಕ್ಕಿಂತ ಹೆಚ್ಚಿಗೆ ಇನ್ನೇನೂ ಹೇಳಲಾರೆ.ನನ್ನ ಲೇಖನದ ವಿಚಾರದಲ್ಲಿ ಸಹಮತವಿಲ್ಲದಿದ್ದರೂ, ನನ್ನ ಪರವಾಗಿ ನಿಂತಿದ್ದೀರಿ. ಈ ಸ್ನೇಹಕ್ಕೆ ನನ್ನ ಧನ್ಯವಾದಗಳು.

ಶಿವ,
ನಿಮ್ಮ ವಿಶ್ವಾಸ ಹೀಗೆಯೇ ಮುಂದುವರೆಯಲಿ.

ಅನಾನಿಮಸ್,
ಪದ ಬಳಕೆಯ ವಿಷಯದಲ್ಲಿ ನನ್ನ ಬ್ಲಾಗ್ ಎಂಟ್ರಿಗಿಂತ ನಿಮ್ಮ ವಿವರಣೆ ಚೆನ್ನಾಗಿದೆಯೆನ್ನಿಸುತ್ತಿದೆ. ನಿಮ್ಮ ಹಾರೈಕೆ, ವಿಶ್ವಾಸ ಹೀಗೆಯೇ ಮುಂದುವರೆಯಲಿ.

ನನ್ನ ಬ್ಲಾಗ್ ಇಷ್ಟವಿಲ್ಲದವರು ತಮ್ಮ ಅಭಿಪ್ರಾಯವನ್ನು ಅವರಿಗೆ ತೋಚಿದಂತೆ ತಿಳಿಸಿದ್ದಾರೆ. ಸಂತೋಷ. ಆದರೆ ಒಂದು ವಿನಂತಿ. ನನ್ನ ದೂಷಣೆ ಪರವಾಗಿಲ್ಲ; ಅವಾಚ್ಯ ಶಬ್ದಗಳ ಬಳಕೆ ಇಲ್ಲದಿದ್ದರೆ ಒಳ್ಳೆಯದೆಂದು ನನ್ನ ಭಾವನೆ. ಕಿರಿಯರೂ, ಹಿರಿಯರೂ ಓದುವಂತಿರಲಿ.

ವಂದನೆಗಳು

Jun 20, 2006, 11:02:00 PM  
Anonymous Anonymous said...

ಇತ್ತೀಚೆಗೆ ಇಂಟರ್ನೆಟ್ ಜಗತ್ತಿನಲ್ಲಿ ಬ್ಲಾಗ್ ಹೊಸ ಸೇರ್ಪಡೆ. ಇದನ್ನು ಪತ್ರಿಕೋದ್ಯಮದ "ಕಾವಲು ನಾಯಿ" ಎಂದು ಕರೆದವರೂ ಇದ್ದಾರೆ.

ಶ್ರೀ ವಿಜಯಸಾರಥಿ ಅವರು ಹೇಳಿದಂತೆ ಪರಾರಿ-ಗಡಿಪಾರು, ಅತ್ಯಾಚಾರ-ವ್ಯಭಿಚಾರ ಇವು ಒಂದಕ್ಕೊಂದು ಪರ್ಯಾಯ ಪದಗಳು. ಪತ್ರಿಕೆ ಅಚ್ಚಿಗೆ ಹೋಗುವ "ಗಡಿಬಿಡಿ" ಯಲ್ಲಿ ಬಳಕೆಯಲ್ಲಿ ಇಂಥ ತಪ್ಪುಗಳು ಆಗಿರಬಹುದು. ಆದರೆ "ಗಡಿಬಿಡಿ" ಎಂಬ ಐಡೆಂಟಿಟಿ ಕಾರ್ಡು ಹಿಡಿದು, ತಪ್ಪಾದಾಗ ತಪ್ಪನ್ನು ಎತ್ತಿ ತೋರಿಸುವವರ ವಿರುದ್ಧ ಹರಿಹಾಯುವುದು ಎಷ್ಟು ಸರಿ? ಪತ್ರಕರ್ತರೂ ಮನುಷ್ಯರೇ, ಅವರೇನೂ ತಪ್ಪಿನಿಂದ ಅತೀತರಲ್ಲ ಅಲ್ಲವೇ?

ಶ್ರೀ ಕರುಣಾಕರ ಅವರು ತಾವು ಹಳ್ಳಿಯವರೆಂಬ ಕಾರಣ ನೀಡಿ, ತುಂಬಾ ಕೀಳು ಮಟ್ಟದ ಭಾಷೆಯಲ್ಲಿ ಬರೆದಿದ್ದಾರೆ. ನಾನೂ ಕುಗ್ರಾಮದವನೇ ಕಣ್ರೀ. ಹಳ್ಳಿಯವರೂ ಕೂಡ ಸುಸಂಸ್ಕೃತರು, ನಾಗರೀಕರು ಎಂಬುದು ನೆನಪಿರಲಿ. ದಯವಿಟ್ಟು ನಿಮ್ಮ "ವಿಕೃತ" ಮನಸ್ಸಿಗೆ ಹಳ್ಳಿಯ ಗಿಲೀಟು ಬಳಿಯಬೇಡಿ.

ವಿದ್ಯಾವಂತರಾದ ನಮ್ಮ ಭಾಷೆ ಇನ್ನೊಬ್ಬರಿಗೆ ನೋವಾಗದಿರಲಿ, ತಪ್ಪನ್ನು ಒಪ್ಪಿಕೊಳ್ಳುವ ದೊಡ್ಡಗುಣ ಇರಲಿ.

ನಮಸ್ಕಾರ.

Jun 21, 2006, 1:23:00 AM  
Anonymous Anonymous said...

ಪ್ರಿಯರೇ,

ಎಲ್ಲವನ್ನೂ ಓದಿದೆ. ನನ್ನ ಭಾಷೆ ಕಟುವಾಗಿದೆ. ವಿಜಯಸಾರಧಿ ಎಲ್ಲವನ್ನೂ ತೇಲಿಸಿ ಬರೆದಿದ್ದಾರೆ. ಶ್ರೀಕಾಂತ್ ಗೆ ಪತ್ರಕರ್ತರ ಮೇಲೆ ಜನ್ಮಾಂತರದ ದ್ವೇಷ ಇದ್ದಂತಿದೆ.

ನಾಥ್ ಎಂಬವರ ವಿದ್ಯಾವಂತರ ಕುರಿತು ಹೇಳಿದ್ದಾರೆ. ತಪ್ಪು ಕಂಡು ಹಿಡಿದು ಆನಂದಪಡುವುದು ವಿಕೃತಿಯಲ್ಲವೇ ನಾಥ್. ವಿದ್ಯಾವಂತರ ಭಾಷೆಯ ಬಗ್ಗೆ ಹೇಳಿದ್ದೀರಿ. ವಿದ್ಯಾವಂತರ ಮನಸ್ಸಿನ ಬಗ್ಗೆಯೂ ಹೇಳಿ. ಒಳ್ಳೆಯ ಸಂಗತಿಗಳ ಬಗ್ಗೆ ಹೇಳಿ ಉಳಿದವರು ಏನು ಓದಬೇಕು ಅಂತ ಹೇಳೋಣ. ತಪ್ಪು ಕಂಡು ಹಿಡಿದು ಸಿನಿಕರಾಗುವುದು ಬೇಡ.

ನಿನ್ನೆ ಜಯಂತ ಕಾಯ್ಕಿಣಿಯವರ ಹೊಸ ಪುಸ್ತಕ ಬಿಡುಗಡೆ ಆಗಿದೆ. ತುಂಬ ಬಿಡುವಿದ್ದರೆ ಅದನ್ನು ಓದಿ. ಈ ಪತ್ರಿಕೆಗಳನ್ನು ಓದಿ ನಿಮ್ಮ ಸಮಯ ಮನಸ್ಸು ಹಾಳು ಮಾಡಿಕೊಂಡು ನಮ್ಮದನ್ನೂ ಹಾಳು ಮಾಡಬೇಡಿ.

ಕರುಣಾಕರ ಕೆ ಎಸ್

Jun 22, 2006, 2:03:00 AM  
Anonymous Anonymous said...

Hi Karunakar,

I agree with you. Sanjaya is a nasty fellow. Sick mind.Let him devote space for appreciation. Otherwise he can only billed as SINIKA.

Jun 22, 2006, 7:21:00 AM  
Anonymous Anonymous said...

I have a basic question. Is there a error-free newspaper in the world? Or for that matter, has anyone developed a bug-less software? Please note: I am asking this question without any 'sinikatana'

Jun 22, 2006, 8:39:00 AM  
Blogger v.v. said...

My thanks to all the readers of my blog. Especially to those who have taken the efforts to comment here. Yes, even to those who disagree with me.

Anonymous,

Considering the amount of news that they cover, the errors that appear in the newpapers aren't that many. I do believe that most journalists strive to provide truth to their readers.

In my view it is not right to dismiss the errors in the newspapers by saying that "it happens all the time", "all newspapers have errors" and "all journalists are like that". In my opinion, that is cynicism.

Why?

First of all it's not true. It does not happen all the time. As I mentioned earlier, it does not even happen most of the time.

Second, to dismiss the errors with broad generalization, is, -- again in my opinion -- an insult to most journalists who really want to be truthful to the extent they can.

My rants -- BTW, that's what they are -- in my blog come from that point of view. I just want to point out the errors that I notice. Hopefully, in an interesting manner.

Thanks again for all the readers who have commented. I won't say this has been a particularly illuminative or pleasant experience. But, certainly different and hence not that uninteresting.

Fun fact: The word "cynic" has its roots in the Greek word for dog. Why? An early Cynic was known for barking and urinating in public!

Jun 22, 2006, 10:43:00 AM  
Anonymous Anonymous said...

ಸಾವಿಲ್ಲದ ಮನೆಯಿಂದ ಸಾಸಿವೆ ತಂದಷ್ಟೇ ಕಷ್ಟದ ಕೆಲಸ ತಪ್ಪಿಲ್ಲದ ಪತ್ರಿಕೆಯೊಂದನ್ನು ಹುಡುಕುವುದು. ಪ್ರತೀ ಪತ್ರಿಕೆಯೂ ತಪ್ಪು ಮಾಡುತ್ತದೆ. ಆದರೆ ಈ ತಪ್ಪುಗಳ ಸಂಖ್ಯೆಯನ್ನು ಕಡಿಮೆ ಮಾಡಿಕೊಳ್ಳಲು ಅದು ಪ್ರಯತ್ನಿಸುತ್ತಲೇ ಇರಬೇಕು. ಮತ್ತು ತನ್ನ ತಪ್ಪುಗಳನ್ನು ಒಪ್ಪಿಕೊಂಡು ಸರಿಯಾದುದನ್ನು ಪ್ರಕಟಿಸುವ ಸೌಜನ್ಯವನ್ನೂ ಅದು ತೋರಿಸಬೇಕು. ಪಾಶ್ಚಾತ್ಯ ಪತ್ರಿಕೆಗಳು ಅದರಲ್ಲೂ ವಿಶೇಷವಾಗಿ ಯುಎಸ್ ನ ಪತ್ರಿಕೆಗಳು ಇದನ್ನು ಕಟ್ಟುನಿಟ್ಟಾಗಿ ಪಾಲಿಸುತ್ತವೆ ಎಂದು ಕೇಳಿಬಲ್ಲೆ. ಗೆಳೆಯರೊಬ್ಬರು ಹೇಳಿದಂತೆ ಸುಮಾರು ಒಂದು ಪುಟದ ತುಂಬಾ ಹಿಂದಿನ ದಿನದ ತಪ್ಪುಗಳ ಪಟ್ಟಿಯೇ ಇರುತ್ತದಂತೆ. ಇತ್ತೀಚೆಗೆ ಭಾರತದಲ್ಲಿ ದಿ ಹಿಂದೂ ಪತ್ರಿಕೆ ರೀಡರ್ಸ್ ಎಡಿಟರ್ ಸಂಪ್ರದಾಯವನ್ನು ಆರಂಭಿಸಿದೆ. ಪ್ರತಿನಿತ್ಯ ತಪ್ಪುಗಳನ್ನು ತಿದ್ದಿಕೊಳ್ಳುವ ಅಂಕಣವೊಂದನ್ನು ಹಿಂದೂ ಪ್ರಕಟಿಸುತ್ತಿದೆ. ಇದು ಕನ್ನಡ ಪತ್ರಿಕೆಗಳಿಗೂ ಮಾದರಿಯಾಗಬಹುದು.

ಇನ್ನೂ ಗಡಿಬಿಡಿಯಲ್ಲಿ, ಆತುರದಲ್ಲಿ ಎಂಬ ಸಾಮಾನ್ಯೀಕರಣವನ್ನು ಬಿಟ್ಟು ಬಿಡುವುದೇ ಒಳ್ಳೆಯದು. ಒಬ್ಬ ವೈದ್ಯ ನಾನು ಆತುರದಲ್ಲಿದ್ದೇನೆ ಎಂದು ರೋಗಿಯನ್ನು ಕೊಂದರೆ ನಾವು ಕ್ಷಮಿಸುತ್ತೇವೆಯೇ?

-ಕೃಷ್ಣಮೂರ್ತಿ

Jun 26, 2006, 11:01:00 AM  
Blogger v.v. said...

ಕೃಷ್ಣಮೂರ್ತಿಯವರೇ,

ನಿಮ್ಮ ಗೆಳೆಯರೆನ್ನುವ ಮಾತು ನಿಜ. ನಾನು ಕಳೆದ ಹದಿನಾರು ವರ್ಷಗಳಿಂದ ತಪ್ಪದೇ ಓದುತ್ತಿರುವ ನನ್ನ ಮೆಚ್ಚಿನ ದಿನ ಪತ್ರಿಕೆಯಾದ ನ್ಯೂಯಾರ್ಕ್ ಟೈಮ್ಸ್‌ನಲ್ಲಿ ಪ್ರತಿದಿನ ಪತ್ರಿಕೆಯ ಎರಡನೆಯ ಪುಟದಲ್ಲಿ ತಿದ್ದುಪಡಿಯನ್ನು ಪ್ರಕಟಿಸುತ್ತದೆ. ತಪ್ಪುಗಳು ಮಹತ್ವದ್ದಾದರೆ, ಆ ತಪ್ಪುಗಳ ಕುರಿತು ಹಲವಾರು ಪುಟಗಳ ಲೇಖನವೇ ಇರುತ್ತವೆ. ಉದಾಹರಣೆಗೆ, ಕೆಲ ವರ್ಷಗಳ ಹಿಂದೆ ಜೇಸನ್ ಬ್ಲೇರ್ ಎಂಬ ವರದಿಗಾರನ ಕಟ್ಟುಕತೆ ಮತ್ತು ಕೃತಿಚೌರ್ಯದ ವರದಿ ಟೈಮ್ಸ್‌ನಲ್ಲಿ ಪ್ರಕಟವಾಗಿತ್ತು. ಅದು ಬಯಲಾದಾಗ, ಟೈಮ್ಸ್ ಆ ವಿಷಯದ ಕುರಿತು ಹಲವಾರು ಲೇಖನ, ತಪ್ಪೊಪ್ಪಿಗೆ ಪ್ರಕಟಿಸಬೇಕಾಯಿತು. ವರದಿಗಾರ ಜೇಸನ್ ಬ್ಲೇರ್ ಜೊತೆಗೇ, ಟೈಮ್ಸಿನ ಪ್ರಧಾನ ಸಂಪಾದಕ ಮತ್ತು ಮ್ಯಾನೇಜಿಂಗ್ ಎಡಿಟರ್ ಸಹ ಕೆಲಸ ಕಳೆದುಕೊಂಡರು. ಇಂತಹ ಪ್ರಸಂಗಗಳಿಂದ ಪತ್ರಿಕೆಯ ವಿಶ್ವಾಸರ್ಹತೆಗೆ ಧಕ್ಕೆಯಾಗಿದ್ದು ನಿಜ. ಆದರೆ, ತಪ್ಪನ್ನು ಒಪ್ಪಿ ಆ ವಿಷಯದ ಕುರಿತು ಪತ್ರಿಕೆಯಲ್ಲಿ ಚರ್ಚಿಸಿದಾಗ, ಓದುಗರಿಗೆ ಕೊಂಚಮಟ್ಟಿಗೆ ಸಮಾಧಾನವಾಗುವುದೂ ಅಷ್ಟೇ ನಿಜ.

ನ್ಯೂಯಾರ್ಕ್ ಟೈಮ್ಸ್ ನನ್ನ ಮೆಚ್ಚಿನ ಪತ್ರಿಕೆಯಾದರೂ, ಆ ಪತ್ರಿಕೆಗಳಲ್ಲಿ ಆಗುವುದು ಸಣ್ಣ ಪುಟ್ಟ ತಪ್ಪುಗಳಷ್ಟೇ ಅಲ್ಲ. ಹಲವು ಮಹತ್ವದ ತಪ್ಪುಗಳೂ ಆಗಿವೆ. ಉದಾಹರಣೆಗೆ, ಇರಾಕ್ ಯುದ್ಧದ ಸಂದರ್ಭದಲ್ಲಿ, ಟೈಮ್ಸಿನ ಹಲವಾರು ವರದಿಗಳು ಬುಶ್ ಆಡಳಿತದ assertions ಅನ್ನು ಪ್ರಶ್ನಿಸುವ ಬದಲಿಗೆ, ಸ್ಟೆನೋಗ್ರಾಫರ್ ತೆಗೆದುಕೊಂಡ ಡಿಕ್ಟೇಷನ್ ತರಹ ಇದ್ದವು. ಕೊನೆಗೆ, ಅಂತಹ ವರದಿಗಳಿಗೆ ಬಹುಮಟ್ಟಿಗೆ ಕಾರಣಕರ್ತಳಾದ ಟೈಮ್ಸ್‌ನ ವರದಿಗಾರ್ತಿ ರಾಜಿನಾಮೆ ನೀಡಬೇಕಾಯಿತು. ಪತ್ರಿಕೆಗೆ ಮುಖಭಂಗವಾಗುವ ವಿವರಣೆಯನ್ನು ಪತ್ರಿಕೆ ಪ್ರಕಟಿಸಬೇಕಾಯಿತು.

ಪತ್ರಿಕೋದ್ಯಮದಲ್ಲಿ ಕೆಲಸ ಮಾಡಿರುವ ನೀವು ನನ್ನ ಬ್ಲಾಗನ್ನು ಓದಿ ನಿಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿರುವುದಕ್ಕೆ ನನ್ನ ಧನ್ಯವಾದಗಳು.

ವಂದನೆಗಳು.

Jun 26, 2006, 3:16:00 PM  
Anonymous Anonymous said...

Anthu kannadigarige yochane maadalu ondu vedike illide. Thamma virodhavaagi iruva teekegalu eshto asahyavaagiddaru, avugalannu prakatisi uththara koduva sajjaninke sanjayarige iruvudu naanu ee blogannu odalu karana.
Kannada pathrikodyamadalli ellavu sariyilla. Yaava reethiyallu sarakaaravannu vimarshisade varadi maaduva sanjevaaniyannu nodi. Adara prasaara ellakkintha hechchu.

Kannada patthrikegala bagge onderadu olleya maathugalu:

Prajavaniyallina "Igo Kannada"
Kannadaprabhadalli aagaaga baruva kannadapara baravanigegalu
Ourkarnataka.com na nooraaru kallugalalli holeyuva onderadu muththugalu.

Ahamadabaadinalladaru sari, bengalurinallaadaru sari, nimma blog sadaa munduvarisi.

Sep 23, 2006, 10:40:00 PM  
Blogger prabhakar said...

I think it is not easy to find mistakes. Sanjay has found mistakes that really changed the meanings in the original article and they deserved the treatment they got. A newspaper cannot make mistakes and get away lightly with it because many people look up at them in their face value. Therefore, if someone translates something, it should be done with extreme care,otherwise they should publish only original writings.

' ಮೊಸರಿನಲ್ಲಿ ಕಲ್ಲು ' ಅನ್ನುವ ಪ್ರಯೊಗ ತಪ್ಪು-ಇದನ್ನು ಇಲ್ಲದಲ್ಲಿ ತಪ್ಪನ್ನು ಕಾಣುವದಕ್ಕೆ ಬಳಸಬೇಕಲ್ಲದೆ ನಿಜವಾದ ತಪ್ಪನ್ನು ತೋರಿಸಿಕೊಟ್ಟದ್ದಕ್ಕಲ್ಲ . ಭಾಷಾಂತರ ದಿಂದ ಅರ್ಥಾಂತರ ಆಗದಿದ್ದರೆ ಪರವಾಗಿಲ್ಲ ಎನ್ನಬಹುದು , ಹಾಗಂತ ' ಪರಾರಿ ' ಎನ್ನುವುದು ' escape' ನ ಭಾಷಾಂತರ ವಾಗುವುದಿಲ್ಲ. .' ಇಲ್ಲದೇ ಹೋದರೆ ಅದು ಪಂಡಿತರ ಭಾಷೆಯಾಗಿ ಸತ್ವಹೀನ ಆಗುತ್ತದೆ ' ಅಂದರೇನು? ನಾನು ಕೂಡ ಹಳ್ಳಿಯವನೆ. ಹಾಗಂತ ಹಳ್ಳಿ ಭಾಷೆಯಲ್ಲಿ ಎಲ್ಲವನ್ನೂ ಅಭಿವ್ಯಕ್ತಿಸಲು ಸಾದ್ಯವಿಲ್ಲ. ಬರಹದ ಭಾಷೆ ಮತ್ತು ಆಡು ಮಾತು ಬೇರೆಯಾಗಿರಲೇ ಬೇಕು.( ಇದಕ್ಕೆ ಅಪವಾದಗಳಿರಬಹುದಷ್ಟೇ ).
www.prabhakarsays.blogspot.com

Jun 6, 2009, 11:24:00 AM  

Post a Comment

<< Home

/* */