Is the situation really that bleak?
Dear Readers,
All through our short existance, we have complained about errors -- factual or otherwise -- in the newspapers that we read. But, we have never lost our hope. We have wondered at times about these errors, but have generally stayed away from making any blanket statement and wholesale indictments of our journalists. Yet, based on the reactions we have seen in the comment section, many are upset.
Now, in his column, writing about the acquisition of Vijaya Karnataka by the Times of India group, here is what Ravi Belagere has to say:
While we don't always agree with Mr.Belagere, we know that he speaks what's in his mind. And, what he says here are pretty strong words. And indeed sad, if it's true.
The question is : Is the situation really that bleak?
We hope not.

"ಬೇರೆ ಯಾವ ಸಬ್ಜೆಕ್ಟಿನಲ್ಲೂ ಸೀಟು ಸಿಗದ ಅನೇಕರು ಯಾಂತ್ರಿಕವಾಗಿ ಪತ್ರಿಕೋದ್ಯಮದಲ್ಲಿ ಎಂ.ಎ., ಮಾಡುತ್ತಾರೆ. ಅಷ್ಟಿಷ್ಟು ತಿಳಿದುಕೊಳ್ಳುತ್ತಾರೆ. ಪತ್ರಿಕೋದ್ಯಮದ ಚಾರ್ಮ್ ಕಂಡು, ಹೆಸರು-ಅಹಂಕಾರ ಗಳಿಸಲೆಂದು ಪತ್ರಿಕೋದ್ಯಮಕ್ಕೆ ಬಂದು ಬಿಡುತ್ತಾರೆ. ಅಂಥವರಿಂದ ನೀವು ಯಾವ ತೆರನಾದ ಬರಹ ಬರೆಸಬಲ್ಲಿರಿ? ಪತ್ರಿಕೋದ್ಯಮಿಗಳು ನೋಡಿದರೆ ಇಂಥವರು : ಧಣಿಗಳು ನೋಡಿದರೆ ಅಂಥವರು. ಇನ್ನು ಓದುಗರ ಪರವಾಗಿ ನಿಂತು ಮಾತನಾಡುವವರು ಯಾರು?Whoa...!
ನನ್ನಂಥ ಅನೇಕರನ್ನು ಕಾಡುತ್ತಿರುವ ಚಿಂತೆ ಅದು. ವ್ಯಥೆ ಕೂಡ."
While we don't always agree with Mr.Belagere, we know that he speaks what's in his mind. And, what he says here are pretty strong words. And indeed sad, if it's true.
The question is : Is the situation really that bleak?
We hope not.
3 Comments:
ಕನ್ನಡದಲ್ಲಿ ನನ್ನ ಅಭಿಪ್ರಾಯ ಬರೆದರೆ ತಪ್ಪಾಗಲಾರದು ಎಂದುಕೊಳ್ಳುತ್ತೇನೆ. ಸ್ವಲ್ಪ ಕಾಲ ನಾನೂ ಪತ್ರಕರ್ತನಾಗಿದ್ದೆ. ರವಿ ಬೆಳೆಗರೆ ಬರೆದಿರುವುದು ಅರ್ಧ ಸತ್ಯ ಮಾತ್ರ. ಎಲ್ಲೂ ಸೀಟ್ ಸಿಗದವರು ಪತ್ರಿಕೋದ್ಯಮಕ್ಕೆ ಸೇರುವುದು ಈಗ ಸಾಧ್ಯವೇ ಇಲ್ಲ. ಏಕೆಂದರೆ ಅದೀಗ ಬೇರೆ ವೃತ್ತಿ ಶಿಕ್ಷಣ ಕೋರ್ಸ್ ಗಳಂತೆಯೇ ಆಗಿಬಿಟ್ಟಿದೆ. ಇದಕ್ಕೂ ಎಂಟ್ರೆನ್ಸ್, ಕ್ಯಾಪಿಟೇಶನ್ ಇತ್ಯಾದಿಗಳೆಲ್ಲಾ ಇವೆ. ಇಲ್ಲಿ ಕೋರ್ಸ್ ಗಳನ್ನು ಮುಗಿಸುವವರು ಪತ್ರಿಕೋದ್ಯಮಕ್ಕೆ ಬರುವ ಬದಲಿಗೆ ಅದಕ್ಕಿಂತ ಹೆಚ್ಚು ಸಂಬಳ ತರುವ ಪಬ್ಲಿಕ್ ರಿಲೇಶನ್ಸ್ ಕೆಲಸಕ್ಕೆ ಸೇರಿಕೊಳ್ಳುತ್ತಾರೆ.
ಇನ್ನು ಬರೆವಣಿಗೆಗೆ ಸಂಬಂಧಿಸಿದ ವಿಷಯ. ಪತ್ರಿಕೆಯೊಂದು ತನ್ನಲ್ಲಿ ಪ್ರಕಟವಾಗುವ ಬರೆಹಗಳ ಗುಣಮಟ್ಟಕ್ಕೆ ಸಂಬಂಧಿಸಿದಂತೆ ಸ್ಪಷ್ಟ ಧೋರಣೆ ಹೊಂದಿದ್ದರೆ ಅದಕ್ಕೆ ಬರೆಯುವವರೂ ಸರಿಯಾಗಿರುತ್ತಾರೆ. ಈಗಿನ ಕನ್ನಡ ಪತ್ರಿಕೆಗಳಲ್ಲಿ ಅತಿದೊಡ್ಡ ಕೊರತೆ ಇರುವುದೇ ಈ ವಿಷಯದಲ್ಲಿ. ಯಾವ ಕನ್ನಡ ಪತ್ರಿಕೆಯೂ ಸುದ್ದಿಗಾಗಿ ಹಣ ಖರ್ಚು ಮಾಡಲು ಸಿದ್ಧವಿಲ್ಲ. ಪತ್ರಿಕೆಯೊಂದರ ಸಂಪಾದಕನ ಸಂಬಳ ಮತ್ತು ಅಲ್ಲಿನ ಜಾಹಿರಾತು ವ್ಯವಸ್ಥಾಪಕನ ಸಂಬಳವನ್ನು ಹೋಲಿಸಿ ನೋಡಿದರೆ ಇದು ಅರ್ಥವಾಗುತ್ತದೆ.
ಸಾಮಾನ್ಯ ಉಪ ಸಂಪಾದಕರು ಮತ್ತು ವರದಿಗಾರರ ಸ್ಥಿತಿಯನ್ನಂತೂ ಹೇಳಿ ಪ್ರಯೋಜನವಿಲ್ಲ. ಪಬ್ಲಿಕ್ ರಿಲೇಶನ್ಸ್ ಕೆಲಸದಲ್ಲಿ ಅತಿ ಕೊನೆಯ ಹಂತದಲ್ಲಿ ಇರುವವನ ಸಂಬಳದ ಅರ್ಧದಷ್ಟನ್ನೂ ಕನ್ನಡ ಪತ್ರಿಕೋದ್ಯಮದಲ್ಲಿ ಅತಿಹೆಚ್ಚು ಸಂಬಳ ಪಡೆಯುವ ಉಪ ಸಂಪಾದಕ-ವರದಿಗಾರ ಗಳಿಸುವುದಿಲ್ಲ. ಸ್ವತಃ ರವಿ ಬೆಳಗೆರೆ ಅವರ ಸಂಪಾದಕೀಯ ಸಿಬ್ಬಂದಿಗೆ ಕೊಡುವ ಸಂಬಳ ಎಷ್ಟು ಎಂಬುದನ್ನು ಬಹಿರಂಗ ಪಡಿಸುತ್ತಾರೆಯೇ.
-ಕೃಷ್ಣಮೂರ್ತಿ
ಕೃಷ್ಣಮೂರ್ತಿಯವರೇ,
ನನ್ನ ಬ್ಲಾಗ್ ಓದಿ ಪ್ರತಿಕ್ರಿಯಿಸುತ್ತಿರುವುದಕ್ಕೆ ಧನ್ಯವಾದಗಳು. ನನ್ನ ಬ್ಲಾಗ್ ಬಹುಮಟ್ಟಿಗೆ ಕನ್ನಡ ಪತ್ರಿಕೆಗಳಿಗೆ ಸಂಬಂಧ ಪಟ್ಟಿದ್ದೇ. ನೀವು ಕನ್ನಡದಲ್ಲಿಯೇ ನಿಮ್ಮ ಅಭಿಪ್ರಾಯ ತಿಳಿಸಿರುವುದು ಸೂಕ್ತವಾಗಿಯೇ ಇದೆ.
ಪತ್ರಿಕೋದ್ಯಮದ ಬಗೆಗಿನ ನನ್ನ ಜ್ಞಾನ ಪತ್ರಿಕೆಗಳನ್ನು ಓದುವಷ್ಟರ ಮಟ್ಟಿಗೆ ಮಾತ್ರ ಇದೆ. ಎಂಟ್ರೆನ್ಸ್ ಟೆಸ್ಟ್, ವರದಿಗಾರರ ಸಂಬಳ, ಗುಣಮಟ್ಟದ ಕುರಿತು ಅಸ್ಪಷ್ಟ ಧೋರಣೆ, ಪಬ್ಲಿಕ್ ರಿಲೇಶನ್ಸ್ ಇತ್ಯಾದಿ ಹಲವಾರು ವಿಚಾರಗಳನ್ನು ಪ್ರಸ್ತಾಪಿಸಿ ಚಿಂತನೆಗೆ ಹಚ್ಚಿದ್ದೀರಿ.
ಒಂದು ಪ್ರಶ್ನೆ: ವರದಿಗಾರರ ಸಂಬಳದ ವಿಚಾರದಲ್ಲಿ ನೀವು ಬರೆದಿರುವುದು ಕನ್ನಡ ಪತ್ರಿಕೆಗಳ ವರದಿಗಾರರಿಗೆ ಮಾತ್ರ ಅನ್ವಯಿಸುತ್ತದೋ ಅಥವಾ ಇಡೀ ಪತ್ರಿಕೋದ್ಯಮಕ್ಕೇ ಅನ್ವಯಿಸುವಂತಹ ಮಾತುಗಳೋ?
ಕನ್ನಡ ಮತ್ತು ಇಂಗ್ಲೀಷ್ ಎರಡೂ ಭಾಷೆಯ ಪತ್ರಿಕೆಗಳನ್ನು ಪ್ರಕಟಿಸುವ ಸಂಸ್ಥೆಗಳು ತನ್ನ ಕನ್ನಡ/ಇಂಗ್ಲೀಷ್ ವರದಿಗಾರರಿಗೆ ನೀಡುವ ವೇತನ ಒಂದೇ ಇರಬಹುದೇ?
ವಂದನೆಗಳು.
ಇಂಡಿಯನ್ ಎಕ್ಸ್ ಪ್ರೆಸ್ ಮತ್ತು ಕನ್ನಡ ಪ್ರಭ, ಡೆಕ್ಕನ್ ಹೆರಾಲ್ಡ್ ಮತ್ತು ಪ್ರಜಾವಾಣಿ, ವಿಜಯ ಟೈಂಸ್ ಮತ್ತು ವಿಜಯ ಕರ್ನಾಟಕ ಹೀಗೆ ಯಾವುದೇ ಉದಾಹರಣೆಯನ್ನು ತೆಗೆದುಕೊಂಡರೂ ಕನ್ನಡ ಪತ್ರಕರ್ತರು ಎರಡನೇ ದರ್ಜೆ ನಾಗರಿಕರಾಗಿರುತ್ತಾರೆ.
ಇದು ಈಗಿನ ಕತೆಯಲ್ಲ. ಮೊದಲಿನಿಂದಲೂ ಅಷ್ಟೇ. ಡೆಕ್ಕನ್ ಹೆರಾಲ್ಡ್ ನಲ್ಲಿ ಕೆಲಸ ಮಾಡುವವರಿಗೆ ಹೆಚ್ಚು ಸಂಬಳ ಎಂಬ ನಿಯಮ ಮೈಸೂರ್ ಪ್ರಿಂಟರ್ಸ್ ಲಿಮಿಟೆಡ್ ನಲ್ಲಿ ಇದ್ದೇ ಇದೆ. ಎಕ್ಸ್ ಪ್ರೆಸ್ ಬಳಗದ ಸ್ಥಾಪಕ ರಾಮನಾಥ್ ಗೋಯೆಂಕಾ ಭಾಷಾ ಪತ್ರಿಕೆಗಳ ಪತ್ರಕರ್ತರನ್ನು ಕೇವಲ ಭಾಷಾಂತರಕಾರರು ಎಂದು ಕರೆದಿದ್ದರು.
ಕನ್ನಡ ಪತ್ರಿಕೋದ್ಯಮದ ಭೀಷ್ಮ ಇತ್ಯಾದಿಯಾಗಿ ಹೊಗಳಿಸಿಕೊಳ್ಳುವ, ಬೆಳೆಗೆರೆ ಮತ್ತು ವಿಶ್ವೇಶ್ವರ ಭಟ್ಟರು ವಾಚಾಮಗೋಚರವಾಗಿ ಹೊಗಳುವ ಶಾಮರಾಯರಷ್ಟು ಕೆಟ್ಟದಾಗಿ ಪತ್ರಕರ್ತರನ್ನು ನಡೆಸಿಕೊಂಡವರು ಕರ್ನಾಟಕದ ಇತಿಹಾಸದಲ್ಲಿಯೇ ಇಲ್ಲ. ಪತ್ರಕರ್ತರನ್ನು ಹೇಗೆ ಬೇಕಾದರೂ ನಡೆಸಿಕೊಳ್ಳಬಹುದು ಎಂದು ಪತ್ರಿಕಾ ಮಾಲೀಕರಿಗೆ ಕಲಿಸಿ ಕೊಟ್ಟವರೇ ಶಾಮರಾಯರು.
-ಕೃಷ್ಣಮೂರ್ತಿ
Post a Comment
<< Home